ದೇಶ

ಸೀಮಾ ಸುಂಕ ಕಾನೂನು ಸಡಿಲಗೊಳಿಸಿ: ವಿಶ್ವಸಂಸ್ಥೆ

Srinivasamurthy VN

ಕಠ್ಮಂಡು: ಭೂಕಂಪ ಪೀಡಿತ ನೇಪಾಳಕ್ಕೆ ವಿವಿಧ ದೇಶಗಳಿಂದ ಪರಿಹಾರ ಸಾಮಗ್ರಿಗಳು ಆಗಮಿಸುತ್ತಿದ್ದು, ಪರಿಹಾರ ಸಾಮಗ್ರಿಗಳಿಗೂ ಸೀಮಾ ಸುಂಕ ವಿಧಿಸುವುದು ಸರಿಯಲ್ಲ. ಹೀಗಾಗಿ ನೇಪಾಳ ಸರ್ಕಾರ ಸೀಮಾ ಸುಂಕ ಕಾನೂನನ್ನು ತಾತ್ಕಾಲಿಕವಾಗಿ ಸಡಿಲಗೊಳಿಸಬೇಕು ವಿಶ್ವಸಂಸ್ಥೆ ಹೇಳಿದೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವಸಂಸ್ಥೆಯ ನೇಪಾಳ ಪ್ರತಿನಿಧಿ ಜಾಮಿ ಮೆಕ್ ಗೋಲ್ಡ್ ರಿಕ್ ಅವರು, ನೇಪಾಳ ಸರ್ಕಾರ ಸೀಮಾ ಸುಂಕ ಕಾನೂನನ್ನು ತಾತ್ಕಾಲಿಕವಾಗಿ ಸಡಿಲಗೊಳಿಸುವ ಮೂಲಕ ಹೆಚ್ಚಾಗಿ ಪರಿಹಾರ ಸಾಮಾಗ್ರಿಗಳು ಆಗಮಿಸುವಂತೆ ಮಾಡಬೇಕು. ಇದರಿಂದ ನಿರಾಶ್ರಿತರಿಗೆ ಹೆಚ್ಚು ಅನುಕೂಲಕರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇತ್ತ ನೇಪಾಳದಲ್ಲಿನ ಜನ ಪರಿಹಾರ ಸಾಮಗ್ರಿಗಳು ದೊರೆಯದೆ ಕಂಗಾಲಾಗಿದ್ದರೆ ಅತ್ತ ತ್ರಿಭುವನ್ ವಿಮಾನ ನಿಲ್ದಾಣದಲ್ಲಿ ನೇಪಾಳ ಸರ್ಕಾರದ ತೆರಿಗೆ ಅಧಿಕಾರಿಗಳು ವಿವಿಧ ದೇಶಗಳಿಂದ ಪರಿಹಾರ ಸಾಮಗ್ರಿಗಳುನ್ನು ಹೊತ್ತು ಆಗಮಿಸಿರುವ ವಿಮಾನಗಳಿಗೆ ಸೀಮಾ ಸುಂಕ ವಿಧಿಸುತ್ತಿದ್ದಾರೆ. ಇದು ವಿಶ್ವಸಂಸ್ಥೆಯ ಕೆಂಗಣ್ಣಿಗೆ ಕಾರಣವಾಗಿದ್ದು, ನೇಪಾಳ ಸರ್ಕಾರದ ವರ್ತನೆಯಿಂದ ಅಸಮಾಧಾನಗೊಂಡಿರುವ ವಿಶ್ವಸಂಸ್ಥೆ ಸೀಮಾ ಸುಂಕಕ್ಕೆ ಸಂಬಂಧಿಸಿದ ಕಾನೂನನ್ನು ಪ್ರಸ್ತುತ ಸಡಿಲಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಪರಿಹಾರ ಸಾಮಗ್ರಿಗಳ ವಿಮಾನಗಳು ವಾಪಸ್
ಅತ್ತ ನೇಪಾಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತ್ರಿಭುವನ್ ಮುಚ್ಚುತ್ತಿದ್ದಂತೆಯೇ ಇತ್ತ ವಿವಿಧ ದೇಶಗಳಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತಿ ಬರುತ್ತಿದ್ದ ವಿಮಾನಗಳು ಲ್ಯಾಂಡ್ ಮಾಡಲು ಸ್ಥಳವಕಾಶ ವಿಲ್ಲದೇ ವಾಪಸ್ ಆದ ಘಟನೆ ಕೂಡ ನಡೆದಿದೆ. ಹೀಗಾಗಿ ಭಾರತ ಸರ್ಕಾರ ಕೋಲ್ಕತಾದಿಂದಲೇ ಸರಕು ಸಾಗಣೆ ವಾಹನಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ನೇಪಾಳಕ್ಕೆ ರವಾನೆ ಮಾಡುತ್ತಿದೆ.

SCROLL FOR NEXT