ದೇಶ

ಪಂಜಾಬ್ ಬಸ್‌ನಲ್ಲಿ ಲೈಂಗಿಕ ಕಿರುಕುಳ: ಮರಣೋತ್ತರ ಪರೀಕ್ಷೆಗೆ ಒಪ್ಪಿದ ಬಾಲಕಿ ತಂದೆ

Vishwanath S

ಮೋಗಾ(ಪಂಜಾಬ್): ಲೈಂಗಿಕ ಕಿರುಕುಳಕ್ಕೆ ಒಳಗಾಗಿ, ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರಿಂದ ಮೃತಪಟ್ಟ ೧೩ ವರ್ಷದ ಬಾಲಕಿಯ ಮರಣೋತ್ತರ ಪರೀಕ್ಷೆಗೆ ಬಾಲಕಿ ತಂದೆ ಒಪ್ಪಿಗೆ ನೀಡಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಕುಟುಂಬಕ್ಕೆ ಸೇರಿದ ಬಸ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಬಾಲಕಿ ಸಾವನ್ನಪ್ಪಿದ್ದಳು. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಮರಣೋತ್ತರ ಪರೀಕ್ಷೆಗೆ ಬಾಲಕಿ ತಂದೆ ಒಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ಬಿಟ್‌ ಬಸ್‌ ಸಂಸ್ಥೆಯ ಸಹ ಮಾಲೀಕರವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ಸಂಸ್ಥೆ ಪರವಾನಗಿ ರದ್ದು ಪಡಿಸುವ ತನಕ ಬಾಲಕಿಯ ಸಂಸ್ಕಾರ ನಡೆಸಲು ಅವರ ಕುಟುಂಬ ನಿರಾಕರಿಸಿದ್ದರಿಂದ ಬಾಲಕಿಯ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದೆ.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಒಡೆತನದ ಕಂಪನಿಗೆ ಸೇರಿದ ಬಸ್ ನಲ್ಲಿ ಸಂಬಂಧಿಕರ ಭೇಟಿಗಾಗಿ 13 ವರ್ಷದ ಬಾಲಕಿ ಹಾಗೂ ಆಕೆಯ ತಾಯಿ ಚಲಿಸುತ್ತಿದ್ದರು. ಈ ವೇಳೆ ಬಸ್ ನಲ್ಲಿದ್ದ ಕಾಮುಕರು ಇಬ್ಬರಿಗೂ ಲೈಂಗಿಕ ಕಿರುಕುಳ ನೀಡಿ ನಂತರ ಬಸ್ ನಿಂದ ಹೊರದಬ್ಬಿದ್ದರು. ಘಟನೆಯಲ್ಲಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ತಾಯಿಯ ಸ್ಥಿತಿ ಈಗಲೂ ಚಿಂತಾನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

SCROLL FOR NEXT