ದೇಶ

ವಾರಣಾಸಿ ಪುಣ್ಯಕ್ಷೇತ್ರ ಪ್ರಗತಿಗೆ 18,349 ಕೋಟಿ ಮಂಜೂರು ಮಾಡಿದ ಮೋದಿ

ನವದೆಹಲಿ: ಹತ್ತಿ ಬಂದ ಏಣಿಯನ್ನು ಒದೆಯೊಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಾಬೀತುಪಡಿಸಿದ್ದಾರೆ. ತಾವು ಗೆದ್ದು ಬಂದ ಕ್ಷೇತ್ರ ವಾರಾಣಸಿಯ ಅಭಿವೃದ್ಧಿಯ ಕನಸು ಕಂಡಿರುವ ಮೋದಿ, ಪುಣ್ಯಕ್ಷೇತ್ರದ ಸರ್ವಾಂಗೀಣ ಪ್ರಗತಿ ಸಲುವಾಗಿ ಬರೊಬ್ಬರಿ ರು.18,349 ಕೋಟಿ ಮಂಜೂರು ಮಾಡಿದ್ದಾರೆ.

ಈ ಮೂಲಕ ಹದಗೆಟ್ಟಿರುವ ಮೂಲ ಸೌಕರ್ಯಗಳನ್ನು ಸರಿಪಡಿಸುವುದರಿಂದ ಮೊದಲಾಗಿ ಪಟ್ಟಣದ ಸೌಂದರ್ಯವನ್ನು ಹೆಚ್ಚಿ ಸುವ ತನಕ ಎಲ್ಲ ರೀತಿಯಲ್ಲೂ ವಾರಾಣಸಿಯ ರೂಪ ಬದಲಾವಣೆಗೆ ಚಾಲನೆ ದೊರೆಯಲಿದೆ.

ಬಿಜೆಪಿ ಸರ್ಕಾರ ಕಳೆದ ಮೇ ತಿಂಗಳಲ್ಲಿ ಅಧಿಕಾರಕ್ಕೇರಿದ ದಿನದಿಂದ ನಗರಾಭಿವೃದ್ಧಿ, ಶಿಪ್ಪಿಂಗ್, ಹೆದ್ದಾರಿ, ಜಲಸಂಪನ್ಮೂಲ ಮುಂತಾದ ಎಲ್ಲ ವಿಭಾಗಗಳ ಮೂಲಸೌಕರ್ಯಗಳ ಪ್ರಗತಿಯತ್ತ ಯೋಜನೆ ಹಮ್ಮಿಕೊಂಡಿದ್ದು, ಅವುಗಳನ್ನು ಕಾರ್ಯಗತಗೊಳಿಸುವಲ್ಲಿ ಶ್ರಮಿಸುತ್ತಿದೆ.

ಯಾವುದಕ್ಕೇನೇನು?

  • ನಗರಕ್ಕೆ ಆಧುನಿಕತೆಯ ಸ್ಪರ್ಶ
  • ನಗರದ ಸುತ್ತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ರು.13,775 ಕೋಟಿ
  • ಉತ್ತರಪ್ರದೇಶ ಮತ್ತು ಬಂಗಾಳದ ನಡುವಣ ಜಲ ಮಾರ್ಗದ ಸುಧಾರಣೆಗಾಗಿ ರು.4,200 ಕೋಟಿ
  • ಗಂಗಾ ನದಿಯ ಸ್ವಚ್ಛತೆ, ಅಭಿವೃದ್ಧಿಗಾಗಿ  ರು.285 ಕೋಟಿ
  • ಪಾರಂಪರಿಕ ಐತಿಹ್ಯಗಳ ಪುನರುಜ್ಜೀವನಕ್ಕಾಗಿ ರು.89 ಕೋಟಿ
SCROLL FOR NEXT