ದೇಶ

ಸಲ್ಮಾನ್ ಮುಸ್ಲಿಂ ಆಗಿದ್ದರಿಂದ ಸುಲಭವಾಗಿ ಜಾಮೀನು ಸಿಕ್ತು: ಸಾದ್ವಿ ಪ್ರಾಚಿ

Vishwanath S

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಮುಸ್ಲಿಂ ಧರ್ಮದವನಾದ್ದರಿಂದ ಆತನಿಗೆ ಸುಲಭವಾಗಿ ಜಾಮೀನು ಸಿಕ್ಕಿದೆ ಎಂದು ಉತ್ತರಪ್ರದೇಶದ ಬಿಜೆಪಿ ನಾಯಕಿ ಸಾದ್ವಿ ಪ್ರಾಚಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

2002 ಹಿಟ್ ಅಂಡ್ ರನ್ ಕೇಸ್ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹೈಕೋರ್ಟ್ ಜಾಮೀನು ನೀಡಿರುವುದಕ್ಕೆ ಸಾದ್ವಿ ಪ್ರಾಚಿ ಅವರು ಈ ರೀತಿ ಹೇಳಿಕೆಯನ್ನು ನೀಡಿದ್ದು, ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ.

ಸಲ್ಮಾನ್ ಖಾನ್ ಮುಸ್ಲಿಂ ಧರ್ಮದವನಾಗಿದ್ದರಿಂದ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಅಲ್ಲದೇ ಆತನನ್ನು ಜಾತ್ಯಾತೀತ ಮಂತ್ರ ಪಠಿಸುವ ಕಾಂಗ್ರೆಸ್ ಕೂಡಾ ಬೆಂಬಲಿಸುತ್ತಿದೆ ಎಂದರು. ಒಂದು ವೇಳೆ ಸಲ್ಮಾನ್ ಮುಸ್ಲಿಂ ಆಗಿರದಿದ್ದರೆ, ಬಡ ಸಂತ್ರಸ್ತನಿಗೆ ನ್ಯಾಯ ಸಿಗುತ್ತಿತ್ತು ಎಂದು ಪ್ರಾಚಿ ಹೇಳಿದ್ದಾರೆ.

ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಗೆ ಕಂಟಕವಾಗಿದ್ದ ಪ್ರಾಚಿ ಅವರಿಗೆ ವಿವಾದಿತ ಹೇಳಿಕೆ ನೀಡಬಾರದೆಂದು ಪಕ್ಷ ಕಡಿವಾಣ ಹಾಕಿತ್ತು. ಆದರೂ ಪ್ರಾಚಿ ಅವರು ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ನೀಡಿದ್ದ 5 ವರ್ಷಗಳ ಶಿಕ್ಷೆಯ ತೀರ್ಪನ್ನು ಶುಕ್ರವಾರ ಬಾಂಬೆ ಹೈಕೋರ್ಟ್ ಅಮಾನತುಗೊಳಿಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

SCROLL FOR NEXT