ದೇಶ

2 ವರ್ಷದಲ್ಲಿ ನೇಪಾಳ ಪುನರ್ ನಿರ್ಮಾಣ

Mainashree

ಕಠ್ಮಂಡು: ಪ್ರಬಲ ಭೂಕಂಪದಿಂದ ಹೆಚ್ಚು ಕಡಿಮೆ ನಾಶವಾದಂತಾಗಿರುವ ನೇಪಾಳವನ್ನು ಇನ್ನೆರಡು ವರ್ಷಗಳಲ್ಲಿ ಪುನರ್ ನಿರ್ಮಾಣ ಮಾಡುವುದಾಗಿ ಅಲ್ಲಿನ ಪ್ರಧಾನಿ ಸುಶಿಲ್ ಕೊಯಿರಾಲ ತಿಳಿಸಿದ್ದಾರೆ.

ದೇಶ ಕಟ್ಟುವ ಕಾರ್ಯಕ್ಕೆ ಸಾಥ್ ನೀಡುವಂತೆ ಸಾರ್ವಜನಿಕರು, ನೆರೆ ದೇಶಗಳು ಮತ್ತು ಪ್ರವಾಸಿಗರಲ್ಲಿ ಅವರು ಮನವಿ ಮಾಡಿದ್ದಾರೆ. 2 ವಾರಗಳ ಹಿಂದೆ ಸಂಭವಿಸಿದ 7.9 ಪ್ರಮಾಣದ ಭೂಕಂಪದಿಂದಾಗಿ ಹಾನಿಗೀಡಾದ ಕಟ್ಟಡಗಳನ್ನು ಪುನಾರಚಿಸಲು ರು.2 ಸಾವಿರ ಕೋಟಿ ಸಂಗ್ರಹ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರಗಳು, ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು 5 ವರ್ಷದೊಳಗೆ ನರ್ ನಿರ್ಮಿಸಲಾಗುವುದು ಎಂದು ಕೊಯಿರಾಲಳಿದ್ದಾರೆ. ನೇಪಾಳದ ಯಾವುದೇ ಪ್ರಜೆಯೂ ನೆಲೆ ಇಲ್ಲದೆ ವಾಸಿಸುವಂತೆ ಮಾಡುವುದಿಲ್ಲ, ಜತೆಗೆ ಅಪೌಷ್ಠಿಕತೆ ಕಾಡದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕಚ್‍ನಲ್ಲಿ ಭೂಕಂಪ
ಗುಜರಾತ್‍ನ ಕಚ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 6.30ರ ಸುಮಾರಿಗೆ 4.3 ಪ್ರಮಾಣದ ಭೂಕಂಪನ ನಡೆದಿದೆ. ಭಾಛೌ ನಗರದ ವಾಯುವ್ಯ ದಿಕ್ಕಿನಿಂದ 22 ಕಿ.ಮೀ. ದೂರದಲ್ಲಿ ಈ ಕಂಪನ ಸಂಭವಿಸಿದೆ. ಇದರ ಬಳಿಕ 7.47ಕ್ಕೆ ಮತ್ತೊಮ್ಮೆ ಭೂಮಿ ಕಂಪಿಸಿರುವುದು ವರದಿಯಾಗಿದ್ದು, ರಿಕ್ಟರ್ ಮಾಪನದಲ್ಲಿ ತೀವ್ರತೆ 2 ಪ್ರಮಾಣದ ಕಂಪನವಾಗಿರುವುದು ದಾಖಲಾಗಿದೆ.

SCROLL FOR NEXT