ಶ್ರೀನಗರ: ವೃತ್ತಿಪರ ಪ್ರವೇಶ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಪಡೆದಿದ್ದ ಹಸು ಭಾನುವಾರ ನಡೆದ ಗೈರು ಹಾಜರಾಗಿದೆ.
ಶೈಕ್ಷಣಿಕ ವ್ಯವಸ್ಥೆಯಲ್ಲಿನ ಲೋಪ-ದೋಷಗಳನ್ನು ಎತ್ತಿಹಿಡಿಯಲು ಜಮ್ಮು-ಕಾಶ್ಮೀರದ ಬದ್ಗಾಂವ್ ನಿವಾಸಿ ಅಬ್ದುಲ್ ರಶೀದ್ ಭಟ್ ತನ್ನ ಹೆಸರಿನಲ್ಲಿ ಕಾರ್ಡ್ ಪಡೆದಿದ್ದಾರೆ. ಶಿಕ್ಷಣ ಪದ್ಧತಿಯನ್ನು ವ್ಯಂಗ್ಯಮಾಡುವುದು ನನ್ನ ಉದ್ದೇಶವಲ್ಲ. ಅದರಲ್ಲಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವುದಕ್ಕಾಗಿ ಈ ರೀತಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಬೆಮೀನಾದ ಸರ್ಕಾರಿ ಕಾಲೇಜು ಬಳಿ ಬೆಳಗ್ಗೆ ಮಾಧ್ಯಮದವರು, ಭಟ್ ಹಾಗೂ ಆತನ ಹಸುವಿನ ಸುದ್ದಿಪಡೆಯಲು ಕಾದಿರುವುದು ಕಂಡುಬಂದಿತು. ಆದರೆ ಹಸು ಪರೀಕ್ಷೆ ಬರೆಯಲು ಬಂದಿರದ ಕಾರಣ ನಿರಾಶೆಯಿಂದ ವಾಪಸಾದರು. ಜಮ್ಮು-ಕಾಶ್ಮೀರದ ವೃತ್ತಿಪರ ಪ್ರವೇಶ ಪರೀಕ್ಷಾ ಮಂಡಳಿಯ ಲೋಪ ದೋಷಗಳನ್ನು ಬಹಿರಂಗಗೊಳಿಸಲು ಭಟ್ ತನ್ನ ಹಸುವಿನ ಹೆಸರಿನಲ್ಲಿ ಅಡ್ಮಿಟ್ ರ್ಡ್ ಪಡೆದಿದ್ದರು. ಗುರದಂಡ್ (ರೆಡ್ ಬುಲ್)ನ ಮಗಳು ಕಾಚೀರ್ ಗಾವ್ (ಕಂದು ಹಸು) ಎಂಬ ಹೆಸರಿನಲ್ಲಿ ಕಾರ್ಡ್ ನೀಡಲಾಗಿತ್ತು.