ಮರ್ಯಾದಾ ಹತ್ಯೆ 
ದೇಶ

ಬಿಹಾರದಲ್ಲಿ ಅತೀ ಅಮಾನುಷ ಮರ್ಯಾದಾ ಹತ್ಯೆ

ಪರ ಜಾತಿಯವನನ್ನು ಪ್ರೇಮಿಸಿದ ಕಾರಣಕ್ಕೆ ಪೋಷಕರೇ ಪ್ರಿಯತಮನೊಂದಿಗೆ ಹೆತ್ತ ಮಗಳನ್ನು ಅಮಾನುಷವಾಗಿ ಮರ್ಯಾದಾ ಹತ್ಯೆ ಮಾಡಿರುವ ದಾರುಣ ಘಟನೆ...

ಪಾಟ್ನಾ: ಪರ ಜಾತಿಯವನನ್ನು ಪ್ರೇಮಿಸಿದ ಕಾರಣಕ್ಕೆ ಪೋಷಕರೇ ಪ್ರಿಯತಮನೊಂದಿಗೆ ಹೆತ್ತ ಮಗಳನ್ನು ಅಮಾನುಷವಾಗಿ ಮರ್ಯಾದಾ ಹತ್ಯೆ ಮಾಡಿರುವ ದಾರುಣ ಘಟನೆ ಬಿಹಾರದ ಗಯಾ ಜಿಲ್ಲೆಯ ಅಮೇಠಾ ಗ್ರಾಮದಲ್ಲಿ ನಡೆದಿದೆ.

ಮರ್ಯಾದಾ ಹತ್ಯೆಮಾಡಿರುವ ಹುಡುಗಿಯ ಕುಟುಂಬ ಸದಸ್ಯರು ಮಗಳು ಹಾಗೂ ಪ್ರಿಯಕರನನ್ನು ಮಾರಣಾಂತಿಕವಾಗಿ ಜಜ್ಜಿ, ಇರಿದು ಕೊಂದಿದ್ದಾರೆ. ಈ ಅಮಾನುಷ ಕಗ್ಗೊಲೆಗೆ ಗ್ರಾಮ ಪಂಚಾಯತ್‌ನ ಒಪ್ಪಿಗೆ ಕೂಡ ಇತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

ಹತ್ಯೆಯ ಸಾಕ್ಷ್ಯಗಳು ಪೊಲೀಸರಿಗೆ ಸಿಗದಂತೆ ಮಾಡಲು ಕಗ್ಗೊಲೆ ಗೈದ ಬಾಲಕಿಯ ಕುಟುಂಬದವರು ಅವಸರ ಅವಸರದಲ್ಲಿ  ಎರಡೂ ಶವಗಳಿಗೆ ಬೆಂಕಿ ಹಿಟ್ಟು ಸುಟ್ಟು ಹಾಕಿದ್ದಾರೆ.

ಪೊಲೀಸರ ಪ್ರಕಾರ, 16 ವರ್ಷದ ಅಪ್ರಾಪ್ತ ಯುವತಿಯ ನೆರೆಮನೆಯವನಾಗಿದ್ದ ಜೈರಾಮ್ ಮಂಝಿ 25ರ ಹರೆಯ. ಇತನಿಗೆ ಹೀಗಾಗಲೇ ಮದುವೆಯಾಗಿದ್ದು, ಮೂರು ಮಕ್ಕಳ ತಂದೆಯಾಗಿದ್ದ. ಇವರಿಬ್ಬರನ್ನು ಗ್ರಾಮಸ್ಥರಲ್ಲಿ ಕೆಲವರು ಗ್ರಾಮದ ಹೊರಗೆ ಜತೆಯಾಗಿರುವುದನ್ನು ಕಂಡಿದ್ದಾರೆ. ಒಡನೆಯೇ ಅವರು ಬಾಲಕಿಯ ಕುಟುಂಬದವರಿಗೆ ವಿಷಯವನ್ನು ತಿಳಿಸಿದ್ದಾರೆ.

ಕೂಡಲೇ ಅವರಿಬ್ಬರನ್ನು ಹಿಡಿದು ತಂದು ಗ್ರಾಮ ಪಂಚಾಯತ್‌ ಸದಸ್ಯರ ಮುಂದೆ ಹಾಜರುಪಡಿಸಲಾಗಿದೆ. ಪಂಚಾಯತ್‌ನವರು ಈ ಜೋಡಿಯ ಮರ್ಯಾದಾ ಹತ್ಯೆಗೆ ಸಮ್ಮತಿಸಿರುವುದಾಗಿ ಹೇಳಲಾಗಿದೆ. ಆ ಪ್ರಕಾರ ಬಾಲಕಿಯ ಕುಟುಂಬದವರು ಜೋಡಿಯನ್ನು ಮಾರಣಾಂತಿಕವಾಗಿ ಹೊಡೆದು ಜಜ್ಜಿ ಕೊಂದಿದ್ದಾರೆ. ಬಳಿಕ ಪಂಚಾಯತ್‌ ಸದಸ್ಯರ ಸಮ್ಮುಖದಲ್ಲೇ ಮೃತ ಜೋಡಿಯನ್ನು ಬಾಲಕಿಯ ಹೆತ್ತವರು ದಫ‌ನ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT