ನವದೆಹಲಿ: ಸಾಮಾಜಿಕ ಜಾಲ ತಾಣಗಳಿಗೆ ಅಶ್ಲೀಲ ಎಂಎಂಎಸ್ ಅಪ್‍ಲೋಡ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಗುರುವಾರ ಬೆಂಗಳೂರಿನ ವ್ಯಕ್ತಿಯೊಬ್ಬನನ್ನು ಬಂಧಿಸಿದೆ.
ಬಂಧಿತನನ್ನು ಕೌಶಿಕ್ ಕುವೊನಾರ್ ಎಂದು ಗುರುತಿಸಲಾಗಿದೆ. ಈತನ ಬಳಿಯಿಂದ 500ಕ್ಕೂ ರಹಸ್ಯವಾಗಿ ಚಿತ್ರಿಸಿದ ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹೈದರಾಬಾದ್ ಮೂಲದ ಎನ್‍ಜಿಒವೊಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರಿಗೆ ಕಳುಹಿಸಿಕೊಟ್ಟಿದ್ದ ಪತ್ರ ಹಾಗೂ 9 ಅಶ್ಲೀಲ ವಿಡಿಯೋ ಇದ್ದ ಪೆನ್
ಡ್ರೈವ್ ಆಧಾರದ ಮೇಲೆ ಈ ತನಿಖೆ ಆರಂಭಿಸಲಾಗಿತ್ತು.
ಈ ಪತ್ರದ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಿಬಿಐಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು. ಆತ್ಯಾಧುನಿಕ ಸಾಫ್ಟ್ ವೇರ್ ಬಳಸಿ ತನಿಖೆ ನಡೆಸಿದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿ ಕುವೊನಾರ್‍ನನ್ನು ಬಂಧಿಸಿದ್ದಾರೆ. ಇದಕ್ಕೂ ಮೊದಲು ಒಡಿಶಾದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದರು.
ಈ ಸಂಬಂಧ ಕುವೊನಾರ್‍ನ ಮನೆಯಲ್ಲಿ ಹುಡುಕಾಟ ನಡೆಸಿದಾಗ ಸಿಬಿಐ ತಂಡಕ್ಕೆ ಅತ್ಯಾ ಧುನಿಕ ವಿಡಿಯೋ ಎಡಿಟಿಂಗ್ ಸಾಫ್ಟ್ ವೇರ್, ಕ್ಯಾಮೆರಾಗಳು ಹಾಗೂ ಇತರೆ ಸಾಮಗ್ರಿಗಳು ಪತ್ತೆಯಾಗಿವೆ. ಬಂಧಿತ ಕೌಶಿಕ್ ಶ್ರೀಮಂತ ಕುಟುಂಬಕ್ಕೆ ಸೇರಿದವನಾಗಿದ್ದು, ಈ ರೀತಿಯ ವಿಡಿಯೋ ಪೋಸ್ಟ್ ಮಾಡುವುದನ್ನೇ ತನ್ನ ಉದ್ಯೋಗವನ್ನಾಗಿಸಿಕೊಂಡಿದ್ದ. ಈತ ಅಂತರ್ಜಾಲಕ್ಕೆ ಹಾಕುತ್ತಿದ್ದ ವಿಡಿಯೋವನ್ನು ಸಾರ್ವಜನಿಕರು ವೀಕ್ಷಿಸಿದಾಗ ಹಣ ಸಿಗುತ್ತಿತ್ತು.