ದೇಶ

ನೇಪಾಳದಲ್ಲಿ ಮತ್ತೆ ಭೂಕಂಪನ, ಉ.ಭಾರತದಲ್ಲಿಯೂ ನಡುಗಿದ ಭೂಮಿ

Srinivasamurthy VN

ಕಠ್ಮಂಡು: ಭೂಕಂಪ ಪೀಡಿತ ನೇಪಾಳದಲ್ಲಿ ಶನಿವಾರ ಮತ್ತೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆ ದಾಖಲಾಗಿದೆ.

ಶನಿವಾರ ಸಂಜೆ ಮತ್ತೆ ನೇಪಾಳ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಭೂಮಿ ಕಂಪಿಸಿರುವ ಕುರಿತು ವರದಿಗಳು ಬಂದಿವೆ. ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಪೂರ್ವಕ್ಕೆ 48 ಕಿ.ಮೀ. ದೂರದ ರಾಮೆಚ್ಚಾಪ್​ನಿಂದ 24 ಕಿಮೀ ಉತ್ತರಕ್ಕೆ 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಯುಎಸ್​ಜಿಎಸ್ ಹೇಳಿದೆ. ನೇಪಾಳದ ನಮಚೆ ಬಝಾರ್ ಸಮೀಪ ರಿಕ್ಟರ್ ಮಾಪಕದಲ್ಲಿ 5.7 ಪ್ರಮಾಣದ ಭೂಕಂಪ ಸಂಭವಿಸಿದೆ ಎಂದು ವರದಿಯೊಂದು ತಿಳಿಸಿದೆ.

ಇನ್ನು ಕಠ್ಮಂಡುವಿನಿಂದ 154 ಕಿ.ಮೀ. ದೂರದಲ್ಲಿರುವ ಬಿಹಾರದ ದರ್ಭಾಂಗದ ಉತ್ತರ ಭಾಗ ಹಾಗೂ ಪಟ್ನಾದಲ್ಲಿಯೂ ಭೂಮಿ ಕಂಪಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

SCROLL FOR NEXT