ನವದೆಹಲಿ: ಸ್ವಾಂತಂತ್ರ್ಯ ಸಂಗ್ರಾಮಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಗ್ರಹಿಸಿದ್ದ ಅಪಾರ ಮೊತ್ತದ ಯುದ್ಧನಿಧಿ ಏನಾಯ್ತು? ಈ ಬಗ್ಗೆ ತನಿಖೆ ನಡೆಸುತ್ತೇನೆಂದ ಅಂದಿನ ಪ್ರಧಾನಿ
ನೆಹರು ಮಾಡಿದ್ದೇನು? ಈ ಕುರಿತ ಸರ್ಕಾರದ ರಹಸ್ಯಪತ್ರವೊಂದು ಬಹಿರಂಗವಾಗಿ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಕೊಂಡಿದೆ.
ಇಂಡಿಯಾ ಟುಡೇ ಪ್ರಕಟಿಸಿರುವ ತನಿಖಾ ವರದಿ ಈ ಕುರಿತು ಹಲವು ವಿವರಗಳನ್ನು ಬಹಿರಂಗಗೊಳಿಸಿದೆ. ಆಜಾದ್ ಹಿಂದ್ ಫೌಜ್(ಐಎನ್‍ಎ) ಬಲವರ್ಧನೆಗಾಗಿ ನೇತಾಜಿ ಮತ್ತು ತಂಡ ಅಪಾರ ಮೊತ್ತದ ಹಣ, ಚಿನ್ನ ಮತ್ತು ಆಭರಣಗಳನ್ನು ಸಂಗ್ರಹಿಸಿದ್ದರು. ಈಗಿನ ಮೌಲ್ಯದಲ್ಲಿ ಆಗ ಸಂಗ್ರಹಿಸಿದ್ದು ಸುಮಾರು ನೂರು ಕೋಟಿ ಮೌಲ್ಯ ಆಗಿತ್ತು.
ಆದರೆ, ನೇತಾಜಿಯ ಅನುಮಾನಾಸ್ಪದ ಸಾವಿನ ನಂತರ ಯುದ್ಧನಿಧಿ ನಾಪತ್ತೆಯಾಗಿತ್ತು. ಸಹಚರರೇ ಲೂಟಿ ಮಾಡಿದರೆಂಬ ಗುಮಾನಿ ಮೂಡಿದೆ. ಆದರೆ, ಈ ಕುರಿತ ಮಾಹಿತಿಯಿದ್ದರೂ ಆಗಿನ ನೆಹರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯ ಮುಖ್ಯಾಂಶಗಳು:
1947 ಮತ್ತು 1953ರ ನಡುವೆ ಪ್ರಧಾನಿ ನೆಹರುಗೆ ಹಲವು ಬಾರಿ ಈ ಬಗ್ಗೆ ತನಿಖೆಗೆ ಒತ್ತಾಯಿಸಿದರೂ ಪ್ರಧಾನಿಯಿಂದ ನಿರ್ಲಕ್ಷ್ಯ.
ತನಿಖೆಗೆ ಆದೇಶಿಸುವ ಬದಲಿಗೆ, ಶಂಕಿತ ಐಎನ್‍ಎ ಸದಸ್ಯರೊಬ್ಬರಿಗೆ ಸರ್ಕಾರದಲ್ಲಿ ಪದವಿ.
ನೇತಾಜಿ 48ನೇ ಹುಟ್ಟುಹಬ್ಬದ ಪ್ರಯುಕ್ತ ರಂಗೂನ್ ನಲ್ಲಿ ವಾರವಿಡೀ ಹಬ್ಬ ಮಾಡಲಾಗಿತ್ತು. ಘನದಿಂದ ತುಲಾಭಾರ ಮಾಡಲಾಗಿತ್ತು.
ಯುದ್ಧನಿಧಿಗಾಗಿ 80ಕೆಜಿ ಚಿನ್ನ ಸೇರಿದಂತೆ 2 ಕೋಟಿಯಷ್ಟು ಹಣ ಸಂಗ್ರಹ ನಿಧಿ ನಾಪತ್ತೆ ಕುರಿತ ವಿವರಗಳಿದ್ದ 37 ಕಡತಗಳು ಪ್ರಧಾನಿ ಕಚೇರಿಯಲ್ಲಿಯೇ ಧೂಳು ಹಿಡಿಯುತ್ತಿವೆ.