ದೇಶ

3 ವರ್ಷಗಳಲ್ಲಿ ತೇಜಸ್ ದೇಶಕ್ಕೆ ಸಮರ್ಪಣೆ

Vishwanath S

ನವದೆಹಲಿ: ಮೂರು ದಶಕಗಳ ಪರಿಶ್ರಮದ ಫಲವಾಗಿ ರೂಪುಗೊಂಡಿರುವ ದೇಶದ ಮೊದಲ ಲಘು ಯುದ್ಧ  ವಿಮಾನ(ತೇಜಸ್)ಗಳ ಮೊದಲ ತುಕುಡಿ 2017-18ರಲ್ಲಿ ವಾಯುಸೇನೆಯನ್ನು ಸೇರಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಮೊದಲ ಹಂತದಲ್ಲಿ 18 ವಿಮಾನಗಳು ವಾಯುಸೇನೆಯನ್ನು ಸೇರ್ಪಡೆಗೊಳ್ಳಲಿವೆ. ತೇಜಸ್ ಲಘು ಯುದ್ಧ ವಿಮಾನ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬದ ಕುರಿತು ಸಂಸತ್ತಿನಲ್ಲಿ ಇತ್ತೀಚೆಗೆ ಸಲ್ಲಿಕೆಯಾಗಿದ್ದ ಮಹಾಲೇಖಪಾಲರ ವರದಿಯಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

SCROLL FOR NEXT