ಎರ್ನಾಕುಲಂ: 14 ವರ್ಷದ ಬಾಲಕಿಯ ಮೇಲೆ ಸತತ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಕ್ಯಾಥೋಲಿಕ್ ಪಾದ್ರಿಗಾಗಿ ಕೇರಳ ಪೊಲೀಸರು ಬಲೆ ಬೀಸಿದ್ದಾರೆ.
ಅತ್ಯಾಚಾರ ಆರೋಪಿ ಪಾದ್ರಿ ವಿರುದ್ಧ ಪೊಲೀಸರು ಲುಕ್ ಔಟ್ ನೋಟೀಸ್ ಜಾರಿ ಮಾಡಿ, ಹಲವು ರಾಜ್ಯಗಳಲ್ಲಿ ಜಾಲ ಹುಡುಕಾಟ ನಡೆಸಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ಈತನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಬಾಲಕಿಯು ತನ್ನ ಪಾಪ ನಿವೇದನೆಗಾಗಿ ಚರ್ಚ್ ಗೆ ಬಂದ ಸಂದರ್ಭದಲ್ಲಿ ಜನವರಿ ಯಿಂದ ಮಾರ್ಚ್ ತಿಂಗಳ ವರೆಗೆ ಆಕೆಯ ಮೇಲೆ ಐದು ಭಾರಿ ಅತ್ಯಾಚಾರ ನಡೆಸಿರುವುದಾಗಿ ಪಾದ್ರಿ ಎಡ್ವಿನ್ ಫಿಗರೇಜ್ ವಿರುದ್ಧ ಬಾಲಕಿ ಪೋಷಕರು ದೂರು ದಾಖಲಿಸಿದ್ದಾರೆ. ಮಕ್ಕಳ ಮೇಲಿನ ಅಪರಾಧಗಳ ನಿಗ್ರಹ ಕಾಯಿದೆಯಡಿ ಬಾಲಕಿ ಪೋಷಕರು ಏಪ್ರಿಲ್ 10 ರಂದು ಪಾದ್ರಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರು.
ಪ್ರಕರಣ ದಾಖಲಾದ ನಂತರ ಪಾದ್ರಿ ಗಲ್ಫ್ ದೇಶಕ್ಕೆ ತೆರಳಿದ್ದರು. ಮೇ 5 ರವರೆಗೆ ಬಂಧಿಸದಂತೆ ಕೇರಳ ಹೈ ಕೋರ್ಟ್ ಪೊಲೀಸರಿಗೆ ನಿರ್ಬಂಧ ವಿಧಿಸಿತ್ತು.
ಮೇ 5ರಂದು ಕೇರಳ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ನಂತರ, ಆರೋಪಿ ಪಾದ್ರಿ ನಾಪತ್ತೆಯಾಗಿದ್ದಾನೆ.