ವಿದೇಶ ಪ್ರವಾಸಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ ವಿರುದ್ಧ ನೀಡಿದ್ದ ಹೇಳಿಕೆ ನೀಡಿದ್ದನ್ನು ಖಂಡಿಸಿ ಪ್ರಾರಂಭವಾಗಿದ್ದ #Modiinsultsindia ಎಂಬ ಟ್ವಿಟರ್ ಟ್ರೆಂಡ್ ಗೆ ಪರ್ಯಾಯವಾಗಿ #ModiIndiasPride ಎಂಬ ಹೊಸ ಟ್ರೆಂಡ್ ಪ್ರಾರಂಭವಾಗಿದೆ.
ನರೇಂದ್ರ ಮೋದಿ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪ್ರಧಾನಿ ವಿರುದ್ಧ ಟ್ವೀಟಿಗರು ಟ್ರೆಂಡ್ ಪ್ರಾರಂಭಿಸಿದ್ದರು. ಕೂಡಲೇ ಎಚ್ಚೆತ್ತ ಮೋದಿ ಅಭಿಮಾನಿಗಳು, ಮೋದಿ ಪರವಾದ ಟ್ರೆಂಡ್ ಪ್ರಾರಂಭಿಸಿ ಮೋದಿ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಟ್ವೀಟ್ ಮಾಡಿ ಮೋದಿ ಭಾರತದ ಹೆಮ್ಮೆ ಎಂದು ಹೇಳುತ್ತಿದ್ದಾರೆ.
ಮೋದಿ ಅಭಿಮಾನಿಗಳು ಹಾಗೂ ಕೇಸರಿ ಕಾರ್ಯಕರ್ತರು ಮೋದಿ ಪರವಾ ಟ್ರೆಂಡ್ ನ ಹೊಡೆತಕ್ಕೆ ಸಿಲುಕಿ #Modiinsultsindia ಟ್ರೆಂಡ್ ನ ಆಯುಷ್ಯ ಕ್ಷೀಣಿಸಿದ್ದು, ಹೆಚ್ಚು ಕಾಲ ತನ್ನ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ, ಪರಿಣಾಮ ಮೋದಿ ಅಭಿಮಾನಿಗಳು ಪ್ರಾರಂಭಿಸಿದ್ದ ಟ್ರೆಂಡ್ ಕೆಲ ಕಾಲ ಟಾಪ್ ಟ್ರೆಂಡಿಂಗ್ ಪಟ್ಟಿಯಲ್ಲಿತ್ತು ಎಂದು ವರದಿಯಾಗಿದೆ. ಈ ಹಿಂದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಭಾರತೀಯರು ಭಾರತದಲ್ಲಿ ಹುಟ್ಟಿರುವುದಕ್ಕೆ ಅವಮಾನವಾಗುತ್ತಿದೆ ಎಂದು ಹೇಳುತ್ತಿದ್ದರು. ಆದರೀಗ ಆ ಮನೋಭಾವ ಬದಲಾಗಿದೆ ಎಂದು ಹೇಳಿದ್ದರು. ಇದನ್ನು ಖಂಡಿಸಿ ಟ್ವಿಟರ್ ನಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.