ದೇಶ

ಮೆಕ್ಸಿಕೋ: ಪೊಲೀಸ್ ಕಳ್ಳಸಾಗಣೆದಾರರ ನಡುವಿನ ಗುಂಡಿನ ಕಾಳಗದಲ್ಲಿ 43 ಸಾವು

Vishwanath S

ಮೆಕ್ಸಿಕೋ: ಮಾದಕ ದ್ರವ್ಯ ಕಳ್ಳಸಾಗಾಣೆದಾರರು ಹಾಗೂ ಮೆಕ್ಸಿಕೋದ ಫೆಡರಲ್ ಪೊಲೀಸ್ ಪಡೆ ನಡುವಿನ ಗುಂಡಿನ ಕಾಳಗದಲ್ಲಿ 43 ಮಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೋದ ಹಿಂಸಾಚಾರ ಪೀಡಿತ ಪಶ್ಚಿಮ ಭಾಗದಲ್ಲಿ ನಡೆದಿದೆ. ಈ ಎನ್ ಕೌಂಟರ್ ನಲ್ಲಿ ಓರ್ವ ಪೊಲೀಸ್ ಕೂಡ ಸಾವನ್ನಪ್ಪಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ಮಾದಕದ್ರವ್ಯ ಕಳ್ಳಸಾಗಣೆದಾರರು ಹಾಗೂ ಫೆಡರಲ್ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು ಎಂದು ನ್ಯಾಷನಲ್ ಸೆಕ್ಯುರಿಟಿ ಕಮಿಷನರ್ ಮೊಂಟೆ ಅಲೆಜಾಂಡ್ರೋ ತಿಳಿಸಿದ್ದಾರೆ.

ಪಶ್ಚಿಮ ಮೆಕ್ಸಿಕೊ ಪ್ರಾಂತ್ಯದ ಟನೂವೂಟೊ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಶಂಕಿತ ಅಪರಾಧಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಫೆಡರಲ್ ಪೊಲೀಸರು ನಡೆಸಿದ ದಾಳಿಗೆ 43 ಮಂದಿ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಎನ್ರಿಕ್ ಪೆನಾ ನಿಟೋ ಮೆಕ್ಸಿಕೋ ಅಧ್ಯಕ್ಷರಾಗಿ 2012ರ ಡಿಸೆಂಬರ್ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ನಡೆದ ದೊಡ್ಡ ಘಟನೆ ಇದಾಗಿದೆ. ಘಟನೆಯಲ್ಲಿ 40ಕ್ಕೂ ಅಧಿಕ ಕಳ್ಳಸಾಗಣೆದಾರರು ಸಾವನ್ನಪ್ಪಿದ್ದಾರೆ.

SCROLL FOR NEXT