ನವದೆಹಲಿ: ಕಳೆದೆರಡು ತಿಂಗಳುಗಳಿಂದ ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ ಅಂತರ್ಜಾಲ ಸಮಾನತೆಗಾಗಿ ಹೋರಾಟ ನಿರ್ಣಾಯಕ ಹಂತ ತಲುಪಿರುವ ಹೊತ್ತಲ್ಲೇ ಸ್ಥಾಯಿ ಸಮಿತಿ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಆಡ್ವಾಣಿ ಸರ್ಕಾರದ ವಿರುದ್ಧ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
ಕಾರ್ಪೊರೆಟ್ ಕಂಪನಿಗಳ ಪರ ನಿಂತು ನೆಟ್ ನ್ಯೂಟ್ರಾಲಿಟಿ ಹೋರಾಟವನ್ನು ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ಪ್ರತಿಪಕ್ಷಗಳ ಮಾತಿಗೆ ಆಡ್ವಾಣಿ ದನಿಗೂಡಿಸಿದರು. `ಪ್ರತಿಪಕ್ಷಗಳ ಮಾತಿನಲ್ಲಿ ಹುರುಳಿರುವುದರಿಂದ ಸಭೆ ಮುಂದೂಡುವುದು ಉತ್ತಮ'' ಎಂದರು.