ಲಖನೌ: ಭಾರತದ ಮುಸ್ಲಿಮರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಭಾರತೀಯ ಮುಸ್ಲಿಮರು ರಾಷ್ಟ್ರೀಯವಾದಿಗಳಾಗಿದ್ದು ಎಂದಿಗೂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಲಖನೌ ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದ ಮುಸ್ಲಿಮರು, ಐ.ಎಸ್.ಐ.ಎಸ್ ನಂತಹ ಮೂಲಭೂತವಾದಿ ಗುಂಪಿನಿಂದ ಪ್ರಭಾವಿತರಾಗಿಲ್ಲ ಭಯೋತ್ಪಾದನೆಯನ್ನು ವಿರೋಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರತಿ ರಾಷ್ಟ್ರವು ಭಯೋತ್ಪಾದನೆಯನ್ನು ಎದುರಿಸುತ್ತಿದ್ದು ಒಗ್ಗಟ್ಟಿನಿಂದ ಉಗ್ರವಾದದ ವಿರುದ್ಧ ಹೋರಾಡಬೇಕಿದೆ ಎಂದು ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಅಲ್ಲದೇ ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದೂ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ನಕ್ಸಲ್ ವಾದದ ಬಗ್ಗೆಯೂ ಮಾತನಾಡಿರುವ ರಾಜನಾಥ್ ಸಿಂಗ್, ಕಳೆದ 10-15 ವರ್ಷಗಳಿಗೆ ಹೋಲಿಸಿದರೆ, ಒಂದು ವರ್ಷದಲ್ಲಿ ನಕ್ಸಲ್ ವಾದ ಶೇ.20 ರಿಂದ 25 ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.