ದೇಶ

ಮೋದಿ ಸರ್ಕಾರಕ್ಕೆ ಒಂದು ವರ್ಷ: 25 ಸಾಧನೆಗಳು; 25 ಸವಾಲುಗಳು

Srinivas Rao BV

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ.26 ಕ್ಕೆ ಒಂದು ವರ್ಷ ಪೂರ್ಣವಾಗಲಿದೆ. 365 ದಿನಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆ ಹಾಗೂ ವೈಫಲ್ಯದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ ಮೋದಿ ಸರ್ಕಾರ 25 ಪ್ರಮುಖ ಸಾಧನೆಗಳನ್ನು ಮಾಡಿದ್ದರೆ, 25 ಕಠಿಣ ಸವಾಲುಗಳತ್ತ ಗಮನ ಹರಿಸಬೇಕಿದೆ. ಆ ಸಾಧನೆಗಳು ಹಾಗೂ ಸವಾಲುಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೋದಿ ಸರ್ಕಾರದ ಸಾಧನೆಗಳು


*ಜನ್ ಧನ್ ಯೋಜನೆ: ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಈ ವರೆಗೂ ಸುಮಾರು 15 ಕೋಟಿಯಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. 10 ಕೋಟಿಗೂ ಹೆಚ್ಚು ರುಪೇ ಕಾರ್ಡ್ ಗಳು ಹಾಗೂ ಜೀವವಿಮೆ, ಪಿಂಚಣಿಯನ್ನು ವಿತರಿಸಲಾಗಿದೆ.
 
* ಪ್ರಧಾನಿಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನವನ್ನು ಕಾರ್ಪೊರೇಟ್ ವಲಯದವರು ಅಳವಡಿಸಿಕೊಂಡಿದ್ದು 2019 ರ ವೇಳೆಗೆ ನಿರ್ಮಲ ಭಾರತವನ್ನು ನಿರ್ಮಿಸುವ ಪಣತೊಟ್ಟಿದ್ದಾರೆ.

*ಅಡುಗೆ ಅನಿಲ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಜಾರಿಯಿಂದ ಹಾಗೂ ಡೀಸೆಲ್ ದರವನ್ನು ನಿಯಂತ್ರಣಮುಕ್ತಗೊಳಿಸಿದ್ದರಿಂದ ದೇಶದ ಬೊಕ್ಕಸಕ್ಕೆ  5 ಬಿಲಿಯನ್ ಡಾಲರ್ ಗಳಷ್ಟು ಉಳಿತಾಯವಾಗುತ್ತಿದೆ.

* ರೈಲ್ವೆ ಕಾಮಗಾರಿ ಉದ್ಯಮದಲ್ಲಿ ಯಾವುದೇ ಮಿತಿಯಿಲ್ಲದೆ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ.

* ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯನ್ನು ಶೇ.49 ಕ್ಕೆ ಏರಿಕೆ, ತಂತ್ರಜ್ಞಾನ ವಿನಿಮಯದಲ್ಲಿ  ಶೇ.74 ರಷ್ಟು ಏರಿಕೆ.

* ವೇಗಗತಿಯಲ್ಲಿ ರಕ್ಷಣಾ ಸಾಮಗ್ರಿಗಳ ಖರೀದಿ: ಈ ವರೆಗೂ 36 ರಾಫೆಲ್ ಗಳ ಆಮದು, ಇನ್ನೂ ಹಲವಾರು ಸಾಮಗ್ರಿಗಳ ಆಮದು ಬಾಕಿ

* ವಿಮೆ ಹಾಗೂ ಪಿಂಚಣಿ ಕ್ಷೆತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮಿತಿ ಶೇ.49 ಕ್ಕೆ ಏರಿಕೆ

*ಕೇಂದ್ರ ಸರ್ಕಾರದ ಷೇರುಗಳು ಶೇ.52 ರಷ್ಟಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಗಳ ಐ.ಪಿ.ಒ, ಎಫ್.ಪಿ.ಒಗಳಿಂದ ಫಂಡ್ ಗಳನ್ನು ಹೆಚ್ಚಿಸಲು ಒಪ್ಪಿಗೆ

* ರಿಯಲ್ ಎಸ್ಟೇಟ್ ಹಾಗೂ ಬಂಡವಾಳ ಹೂಡಿಕೆ ಪ್ರತಿಷ್ಠಾನಗಳ ಸ್ಥಾಪನೆಗೆ ಒಪ್ಪಿಗೆ

* ಪ್ರಧಾನ ಮಂತ್ರಿ ಕನಸಿನ ೧೦೦ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ  

* ಹೈ ಸ್ಪೀಡ್ ರೈಲುಗಳು ಸೇರಿದಂತೆ 5 ವರ್ಷಗಳಲ್ಲಿ ಪೂರೈಸಬೇಕಾದ ರೈಲ್ವೇ ಇಲಾಖೆಯ ವಿವಿಧ ಯೋಜನೆಗಳಿಗೆ 130 ಡಾಲರ್ ಗಳಷ್ಟು ಹಣ ಮೀಸಲು

* ಪ್ಯಾನ್ ಭಾರತ ಸರಕು ಮತ್ತು ಸೇವೆಗಳ ಆಡಳಿತಕ್ಕೆ ನಿರ್ಣಾಯಕ ಕ್ರಮ

* ಕಲ್ಲಿದ್ದಲ ಹರಾಜು ಪ್ರಕ್ರಿಯೆ ಯಶಸ್ವಿ, ಮತ್ತಷ್ಟು ಕಲ್ಲಿದ್ದಲನ್ನು ಹರಾಜು ಹಾಕಲು ಸಿದ್ಧತೆ

* ಗಣಿಗಾರಿಕೆ ನಿಯಂತ್ರಣ ಮತ್ತು ಅಭಿವೃದ್ಧಿ ಮಸೂದೆ ಜಾರಿಯಿಂದ ಗಣಿಗಾರಿಕೆ ವಲಯದಲ್ಲಿದ್ದ ಬಿಕ್ಕಟ್ಟು ಅಂತ್ಯ

* ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಗಳಿಗಾಗಿ ಟೆಲಿಕಾಮ್ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಯಶಸ್ವಿ

*ಉದ್ಯೋಗ ಸೃಷ್ಟಿ ಉದ್ದೇಶದಿಂದ ಮೇಕ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾದಂತಹ ಯೋಜನೆಗಳ ಜಾರಿ

*  ಉದ್ಯಮಿಗಳ ಪ್ರೋತ್ಸಾಹಕ್ಕಾಗಿ  20 ಸಾವಿರ ಕೋಟಿ ರೂ. ಆರಂಭಿಕ ನಿಧಿಯೊಂದಿಗೆ ಮುದ್ರಾ ಬ್ಯಾಂಕ್ ಗೆ ಚಾಲನೆ

*ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಹೂಡಿಕೆ ಹಿಂಪಡೆಯಲು ಅನುಮತಿ

* ತ್ವರಿತಗತಿಯ ನಿರ್ಣಯ ಕೈಗೊಳ್ಳಲು ಕೆಲವು ಸಚಿವಾಲಯಗಳನ್ನು ರದ್ದತಿ

*ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಅನುದಾನ ಹಂಚಿಕೆ ವಿಷಯದಲ್ಲಿ 14 ನೇ ಹಣಕಾಸು ಆಯೋಗದ ಶಿಫಾರಸು ಅಳವಡಿಕೆ

*ಉಕ್ಕು, ಕಲ್ಲಿದ್ದಲು ಮತ್ತು ವಿದ್ಯುತ್ ಯೋಜನೆಗಳ ಪರವಾನಗಿಗೆ ಏಕಗವಾಕ್ಷಿ ಪದ್ಧತಿ ಅಳವಡಿಕೆ

* ಹಣದುಬ್ಬರ ನಿಯಂತಿಸಲು ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ

* ರೂಪಾಯಿ 5,000 ಕೋಟಿ ವೆಚ್ಚದಲ್ಲಿ  ಉಗ್ರಾಣ ಮೂಲಸೌಕರ್ಯ ನಿಧಿ ಸ್ಥಾಪನೆ.

*ಕನಿಷ್ಠ ಪರ್ಯಾಯ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚನೆ

*ವಿದೇಶಿ ನಿಧಿಯ ಆದಾಯ ತೆರಿಗೆ ನಿರ್ವಹಣೆಯ ಬಗ್ಗೆ ಸ್ಪಷ್ಟತೆ


ಮೋದಿ ಸರ್ಕಾರದ ಮುಂದಿರುವ ಸವಾಲುಗಳು:

ಅಂಗೀಕಾರ ಪಡೆಯದ ಭೂಸ್ವಾಧೀನ ಮಸೂದೆಯಿಂದ ಹೂಡಿಕೆದಾರರಲ್ಲಿ  ಕಡಿಮೆಯಾಗುತ್ತಿರುವ ಉತ್ಸಾಹವನ್ನು  ಎದುರಿಸುವುದು ಮೋದಿ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ

*ಭಾರತದ ಆರ್ಥಿಕ ಸ್ಥಿತಿಯನ್ನು ಪುನಶ್ಚೇತನಗೊಳಿಸುವುದು

* ವಿವಿಧ ಯೋಜನೆಗಳಿಗಾಗಿ ಹೆಚ್ಚು ವೆಚ್ಚ ಮಾಡುವುದಕ್ಕೆ ಹೊಸ ಮಾರ್ಗಗಳನ್ನು ಅನುಸರಿಸುವುದು

* ವ್ಯಾಪಾರ ನಡೆಸುವುದಕ್ಕೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು, ಇದಕ್ಕಾಗಿ ಕಾರ್ಮಿಕ ಕಾನೂನಿಗೆ ಸಂಬಂಧಿಸಿದ 35 ಕಾನೂನನ್ನು ಕೇವಲ ಶಾಸನಗಳಿಗೆ ಇಳಿಕೆ ಮಾಡುವುದು

*ಚಿನ್ನದಿಂದ ಹಣಗಳಿಕೆ ಮತ್ತು ಗೋಲ್ಡ್ ಬಾಂಡ್ ಗೆ ಸಂಬಂಧಿಸಿದ ಕರಡು ಮಸೂದೆಯನ್ನು ಜಾರಿಗೆ ತರುವುದು

*ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆಯನ್ನು ಆಹಾರ ಮತ್ತು ರಸಗೊಬ್ಬರ ವಲಯಗಳಿಗೂ ವಿಸ್ತರಿಸುವುದು

* 2016 ರಿಂದ ಜಾರಿಗೆ ಬರಲಿರುವ ಜಿ.ಎಸ್.ಟಿ.ಗೆ ಉತ್ತೇಜನ ನೀಡುವುದು

* ದೇಶದ ಉತ್ಪಾದನೆಯನ್ನು ಹೆಚ್ಚಿಸಲು ಕೃಷಿ ವಲಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು

* ಕೃಷಿ ಉತ್ಪನ್ನಗಳಿಗೆ ರಾಷ್ಟ್ರೀಯ ಸಾಮಾನ್ಯ ಮಾರುಕಟ್ಟೆ ಸ್ಥಾಪನೆ ಮಾಡುವುದು

* ಕಪ್ಪು ಹಣ ವಾಪಸ್ ತರುವ ಬಗ್ಗೆ ಕಾಯ್ದೆ ಜಾರಿಯಾದ ಕೂಡಾಲೇ ಭಾರತದಿಂದ ಹೊರಹೋಗಿರುವ ಅಷ್ಟೂ ಕಪ್ಪು ಹಣವನ್ನು ವಾಪಸ್ ತರಬೇಕಿರುವುದು ಮೋದಿ ಸರ್ಕಾರ ಎದುರಿಸುತ್ತಿರುವ ಬಹು ದೊಡ್ಡ ಸವಾಲು

* ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಬಂಡವಾಳವನ್ನು ಒಳಹರಿಸುವುದೂ ಸಹ ಮೋದಿ ಸರ್ಕಾರ ಮೇಲಿರುವ ಸವಾಲುಗಳಲ್ಲಿ ಪ್ರಮುಖವಾಗಿದ್ದು ಮೋದಿ ಸರ್ಕಾರ ಎದುರಿಸುತ್ತಿರುವ ಸವಾಲುಗಳಲ್ಲಿ ಒಂದು.

*ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಬಲವರ್ಧನೆ ಮಾಡುವುದಾಗಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ.  

* ಹೊಸ ಬ್ಯಾಂಕಿಗ್ ಪರವಾನಗಿಯನ್ನು ಇನ್ನೂ ನೀಡಬೇಕಾಗಿದೆ.

*ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದರೂ ಸಬ್ಸಿಡಿಗಳನ್ನು ನಿಭಾಯಿಸಲು ಇನ್ನಷ್ಟೇ ಸೂಕ್ತ ಮಾರ್ಗ ಸೂಚಿ ರಚಿಸಬೇಕಿದೆ.

* ಕೋಲ್ ಬೆಡ್ ಮೀಥೇನ್ ಗೆ ಹೊಸ ನೀತಿ ರೂಪಿಸುವ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ.

*ಪ್ರಸ್ತುತ ಇರುವ  ಮೆಗಾ ವಿದ್ಯುತ್ ಯೋಜನೆಗಲೇ ಸಂಪೂರ್ಣವಾಗದೇ ಇರುವಾಗ ಹೊಸ 5 ಯೋಜನೆಗಳು ಇನ್ನೂ ನಿರೀಕ್ಷೆಯ ಹಂತದಲ್ಲೇ ಇವೆ.

* ಹಳೆಯ ಪ್ರಕರಣಗಳಲ್ಲಿ ಕನಿಷ್ಟ ಪರ್ಯಾಯ ತೆರಿಗೆಯನ್ನು ಇನ್ನೂ ಪರಿಹರಿಸಲಾಗಿಲ್ಲ

* ಸ್ಮಾರ್ಟ್ ಸಿಟಿ ಯೋಜನೆಗಳ ಮೇಲ್ವಿಚಾರಣೆಗಾಗಿ ರೂಪಿಸಲಾಗಿದ್ದ  ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಪ್ರಾಧಿಕಾರ ಇನ್ನೂ ಅತ್ಹಿತ್ವಕ್ಕೆ ಬಂದಿಲ್ಲ.

* ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಘಟಕಗಳಿಗೆ ಹೂಡಿಕೆ ಮಿತಿಯನ್ನು ಏರಿಕೆ ಮಾಡುವ ಭರವಸೆ ಇನ್ನೂ ಈಡೇರಿಲ್ಲ

* ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿರುವ ತೊಡಕುಗಳನ್ನು ನಿರ್ವಾರಿಸುವುದೂ ಸಹ ಮೋದಿ ಸರ್ಕಾರದ ಪ್ರಮುಖ ಸವಾಲುಗಳಲ್ಲೊಂದು

* 2 ನೇ ಮತ್ತು 3 ನೇ ಹಂತದ ನಗರಗಳಲ್ಲಿ 50  ಫ್ರಿಲ್ ರಹಿತ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡುವ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ.
 
*ಚುನಾವಣೆ ಸಂದರ್ಭದಲ್ಲಿ ಘೋಷಿಸಲಾಗಿದ್ದ ಭರವಸೆಗಳಲ್ಲಿ ಒಂದಾಗಿರುವ ದೇಶಾದ್ಯಂತ  25,000 ಕಿ.ಮೀ. ಅನಿಲ ಗ್ರಿಡ್ ಸ್ಥಾಪಿಸುವ ಗುರಿಯನ್ನು ಪೂರೈಸುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕಿದೆ.  

* ಮೇಕ್ ಇನ್ ಇಂಡಿಯಾ ವನ್ನು ಬಲಪಡಿಸಿಕೊಳ್ಳುವುದಕ್ಕೆ ಭಾರತದ ಉತ್ಪಾದಕರಿಗೆ ಅನುಕೂಲವಾಗುವಂತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಜವಾಬ್ದಾರಿಗೆ ಧಕ್ಕೆಯಾಗದಂತೆ  ಪರ್ಯಾಯ ತೆರಿಗೆಗಳನ್ನು ತೆಗೆದು ಹಾಕುವುದು ಸಹ ಮೋದಿ ಸರ್ಕಾರದ ಮುಂದಿರುವ ಸವಾಲಾಗಿದೆ.

SCROLL FOR NEXT