ಕೊಲ್ಕೋತಾ: ಪೊಲೀಸರಿಂದ ರಾಜಕಾರಣಿಗಳು ಶೂ ಲೇಸ್ ಕಟ್ಟಿಸಿಕೊಳ್ಳುವುದು, ಚಪ್ಪಲಿ ಪಾಲೀಶ್ ಮಾಡಿಸಿಕೊಳ್ಳುವುದು ಹಾಗೂ ತಾವಿದ್ದ ಸ್ಥಳಕ್ಕೆ ಪಾದರಕ್ಷೆಗಳನ್ನು ರಿಸಿಕೊಳ್ಳುವುದು ಇವಾಗ ಕಾಮನ್ ಆಗಿಬಿಟ್ಟಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಯೋಜನಾಭಿವೃದ್ದಿ ಸಚಿವರಾಗಿರುವ ರಾಚ್ಪಾಲ್ ಸಿಂಗ್ ತಮ್ಮ ರಕ್ಷಣೆಗೆ ಸರ್ಕಾರ ನೀಡಿರುವ ಪೊಲೀಸ್ ಗಾರ್ಡ್ ರಾಮ್ ಕಿಂಕರ್ ಬಾಜಿ ಕೈಯ್ಯಿಂದ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ರಾಚ್ಪಾಲ್ ಸಿಂಗ್ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿರುವ ಚಿತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಪೊಲೀಸರನ್ನು ತುಂಬಾ ನಿಕೃಷ್ಟವಾಗಿ ರಾಜಕಾರಣಿಗಳು ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನ. ರಾಚ್ಪಾಲ್ ಸಿಂಗ್ ಭಾರತೀಯ ಪೊಲೀಸ್ ಸೇವೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು ಪೊಲೀಸರನ್ನೆ ಇಷ್ಟು ಹೀನವಾಗಿ ನಡೆಸಿಕೊಂಡಿರುವುದು ಚರ್ಚಾಸ್ಪದವಾಗಿದೆ.