ಪಣಜಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಮಂಗಳವಾರ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಬಹಳ ಗಂಭೀರವಾಗಿದ್ದು, ವಿಷಯ ಇತ್ಯರ್ಥಗೊಳ್ಳಲು ಬಹಳ ಸಮಯಬೇಕಾಗುತ್ತದೆ. ರಾಮಮಂದಿರ ನಿರ್ಮಾಣ ಕೆಲಸ ದೇಶದ ಕೆಲಸ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ರಾಮಮಂದಿರ ನಿರ್ಮಾಣದ ವಿಷಯ ಇದೀಗ ವಿಚಾರಣೆಯ ಹಂತದಲ್ಲಿದ್ದು, ಭೂಮಿ ದೊರಕಿದ ಕೂಡಲೇ ಮಂದಿರ ನಿರ್ಮಾಣಕ್ಕೆ ಸರ್ಕಾರ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಹಮತ ದೊರಕಿದರೆ. ಮಂದಿರ ನಿರ್ಮಾಣದ ಕುರಿತಂತೆ ಈವರೆಗೂ ಹೋರಾಟ ಮಾಡಿಕೊಂಡು ಬಂದಿರುವಂತಹ ಸಂಘಟನೆಗಳೇ ರಾಮಮಂದಿರ ನಿರ್ಮಾಣ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಯನ್ನು ಕೂಡಲೇ ಈಡೇರಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳು ಆಗ್ರಹಿಸಿದ್ದವು.