ಸಲಿಂಗ ವಿವಾಹ(ಸಾಂದರ್ಭಿಕ ಚಿತ್ರ) 
ದೇಶ

ಸಲಿಂಗ ಸಂಗಾತಿ: ಶ್ವೇತಾ ವೆಡ್ಸ್ ಸ್ಮೃತಿ

ಆ ಪ್ರೇಮಿಗಳಿಗೆ ಒಂದಾಗುವ ಅವಕಾಶ ಭಾರತದಲ್ಲೆಲ್ಲೂ ಸಿಗಲೇ ಇಲ್ಲ. ಅವರಿಬ್ಬರನ್ನು ಕುಟುಂಬದವರೂ ತಮ್ಮಿಂದ ದೂರವಿಟ್ಟರು...

ಹೈದರಾಬಾದ್: ಆ ಪ್ರೇಮಿಗಳಿಗೆ ಒಂದಾಗುವ ಅವಕಾಶ ಭಾರತದಲ್ಲೆಲ್ಲೂ ಸಿಗಲೇ ಇಲ್ಲ. ಅವರಿಬ್ಬರನ್ನು ಕುಟುಂಬದವರೂ ತಮ್ಮಿಂದ ದೂರವಿಟ್ಟರು.

ಸಮಾಜವೂ ಬೆಂಬಲ ನೀಡಲಿಲ್ಲ. ವರುಷಗಳಿಂದ ಬಲ್ಲ ಗೆಳೆಯ ಗೆಳತಿಯರೂ ಅವರನ್ನು ಅಸಹ್ಯವೆಂಬಂತೆ ನೋಡಿದರು. ರಿಜಿಸ್ಟರ್ಡ್ ಮದುವೆ ಆಗೋಣ ಅಂದ್ರೆ ಕಾನೂನು ಕೂಡ ಅವರ ಪರವಾಗಿರಲಿಲ್ಲ. ಕೊನೆಗೂ ಅವರು ಮದುವೆಯಾಗಲಿಕ್ಕಾಗಿ ದೇಶ ತೊರೆದೇ ಹೋಗಬೇಕಾಯ್ತು.

ಹತ್ತು ವರ್ಷಗಳ ಅವರ ಪ್ರೀತಿಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಹಸಿರು ನಿಶಾನೆ  ಸಿಕ್ಕು ವಿವಾಹ ಭಾಗ್ಯ ದೊರೆಯಿತು. ಅಂದಹಾಗೆ ಆ ಪ್ರೇಮಿಗಳ ಹೆಸರು ಶ್ವೇತಾ ಪೈ ಮತ್ತು ಸ್ಮೃತಿ ನಾರಾಯಣ್! ಹೌದು, ಅದು ಸಲಿಂಗಿ ಸ್ತ್ರೀಯರ ವಿವಾಹ. ಹೈದರಾಬಾದ್ ಮೂಲದ ಗೂಗಲ್ ಉದ್ಯೋಗಿಗಳಾದ ಶ್ವೇತಾ ಮತ್ತು ಸ್ಮೃತಿ ಸಲಿಂಗ ಹಕ್ಕುಗಳಿಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.

ಹಲವು ಎಲ್ ಜಿಬಿಟಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದರು. ಆದರೆ ಖುದ್ದು ಅವರಿಬ್ಬರ ಪ್ರೀತಿಗೇ ಎಲ್ಲೂ ಮಾನ್ಯತೆ ಸಿಗದೇ ಹೋದಾಗ, ಅವರ ವಿರುದ್ಧ ಬೆದರಿಕೆಗಳೆಲ್ಲ ಬಂದಾಗ ತಮ್ಮ ಗುಂಪಿನವರದೇ ಬೆಂಬಲದಿಂದ ಪ್ರೀತಿ ಕಾಯ್ದುಕೊಂಡು, ಇದೀಗ ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಹಾಲ್ ನಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT