ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ 
ದೇಶ

ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿಗೆ 2015ರ "ಸಂಸದ ರತ್ನ" ಪ್ರಶಸ್ತಿ

ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಗೆಯಾಗಿರುವ ರಾಜಸ್ತಾನದ ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ ಅವರಿಗೆ 2015ರ "ಸಂಸದ ರತ್ನ" ಪ್ರಶಸ್ತಿ ಒಲಿದುಬಂದಿದೆ.

ಚೆನ್ನೈ: ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಗೆಯಾಗಿರುವ ರಾಜಸ್ತಾನದ ಪಾಲಿ ಕ್ಷೇತ್ರದ ಬಿಜೆಪಿ ಸಂಸದ ಪಿಪಿ ಚೌದರಿ ಅವರಿಗೆ 2015ರ "ಸಂಸದ ರತ್ನ" ಪ್ರಶಸ್ತಿ ಒಲಿದುಬಂದಿದೆ.

ಬಿಜೆಪಿ ಸದಸ್ಯ ಪಿಪಿ ಚೌಧರಿ ಅವರು ಸಂಸತ್ತಿನ ಮುಂಗಡಪತ್ರದ ಅಧಿವೇಶನದ ಕೊನೆಯವರೆಗೆ ಸದನದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 2015ರ "ಸಂಸದ ರತ್ನ" ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. 16ನೇ ಲೋಕಸಭೆಯಲ್ಲಿ ಮುಂಗಡಪತ್ರ ಕಲಾಪದ ಅಂತ್ಯದವರೆಗೆ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ್ದಕ್ಕಾಗಿ "ಸಂಸದ ರತ್ನ-2015" ಪ್ರಶಸ್ತಿಗೆ ಪಾತ್ರರಾಗಿರುವ ನಾಲ್ವರು ಸಂಸದರಲ್ಲಿ ಚೌಧರಿ ಕೂಡ ಒಬ್ಬರಾಗಿದ್ದಾರೆ’ ಎಂದು ಪ್ರೈಮ್​ಪಾಯಿಂಟ್ ಪೌಂಡೇಷನ್​ನ ಅಧ್ಯಕ್ಷ ಕೆ. ಶ್ರೀನಿವಾಸನ್ ಬುಧವಾರ ಚೆನ್ನೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರೇತರ ಸಂಘಟನೆಯಾಗಿರುವ ಪ್ರೈಮ್​ಪಾಯಿಂಟ್ ಫೌಂಡೇಷನ್ ಸಂಸ್ಥೆಯು ಸಂಸತ್ತಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ ಸದಸ್ಯರಿಗೆ 2009ರಿಂದಲೂ "ಸಂಸದ ರತ್ನ" ಪ್ರಶಸ್ತಿ ನೀಡುತ್ತಿದೆ. ಸದಸ್ಯರು ಎತ್ತುವ ಪ್ರಶ್ನೆಗಳ ಸಂಖ್ಯೆ, ಅವರು ಪಾಲ್ಗೊಳ್ಳುವ ಚರ್ಚೆಗಳ ಸಂಖ್ಯೆ, ಅವರು ಮಂಡಿಸುವ ಖಾಸಗಿ ಮಸೂದೆಗಳ ಸಂಖ್ಯೆ ಹಾಗೂ ಸದನದಲ್ಲಿ ಹಾಜರಾತಿ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಸ್ತುತ ಪಾಲಿ ಕ್ಷೇತ್ರದ ಸಂಸದ ಪಿಪಿ ಚೌಧರಿ ಅವರು 2 ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಅತ್ಯಂತ ಹೆಚ್ಚು (176) ಚರ್ಚೆಗಳಲ್ಲಿ ಪಾಲ್ಗೊಂಡದ್ದಕ್ಕಾಗಿ ಮತ್ತು ಮೊದಲ ಬಾರಿಯ ಸದಸ್ಯರಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿದ್ದುದಕ್ಕಾಗಿ ಹೀಗೆ 2 ಪ್ರಶಸ್ತಿಗಳು ಚೌಧರಿ ಅವರಿಗೆ ಲಭಿಸಿವೆ ಎಂದು ತಿಳಿದುಬಂದಿದೆ.

ಪ್ರೈಮ್ ಫೌಂಡೇಷನ್ ನೀಡುವ ಇನ್ನೆರಡು ಪ್ರಶಸ್ತಿಗಳಿಗೆ ಮಹಾರಾಷ್ಟ್ರದ ಶಿರಂಗ್ ಕ್ಷೇತ್ರದ ಶಿವಸೇನಾ ಸದಸ್ಯ ಚಂದು ಬರ್ನೆ ಮತ್ತು ಜಾರ್ಖಂಡ್​ನ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರು ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ; ಲೆಬನಾನ್ ಕದನ ವಿರಾಮ, ಸ್ವತ್ತುಗಳ ಬಿಡುಗಡೆ ಪ್ರಮುಖ ಅಜೆಂಡಾ; Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಇಂದು ಸಂಧಾನ ಮಾತುಕತೆ; Video

SCROLL FOR NEXT