ಶಿರಡಿ-ಮೈಸೂರು ಎಕ್ಸ್ ಪ್ರೆಸ್ ನಲ್ಲಿ ದರೋಡೆ 
ದೇಶ

ಶಿರಡಿ-ಮೈಸೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಭಾರಿ ದರೋಡೆ

ಶಿರಡಿ-ಮೈಸೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಮಂಗಳವಾರ ತಡರಾತ್ರಿ 30 ರಿಂದ 50 ಮಂದಿಯ ದರೋಡೆಕೋರರ ಗುಂಪು ನಾಲ್ಕು ಬೋಗಿಗಳಿಗೆ ನುಗ್ಗಿ ಭಾರಿ ದರೋಡೆ ಮಾಡಿರುವ ಘಟನೆ ತಡ..

ಬಾಲಾಪುರ(ಮಹಾರಾಷ್ಟ್ರ): ಶಿರಡಿ-ಮೈಸೂರು ಎಕ್ಸ್​ಪ್ರೆಸ್ ರೈಲಿನಲ್ಲಿ ಮಂಗಳವಾರ ತಡರಾತ್ರಿ 30 ರಿಂದ 50 ಮಂದಿಯ ದರೋಡೆಕೋರರ ಗುಂಪು ನಾಲ್ಕು ಬೋಗಿಗಳಿಗೆ ನುಗ್ಗಿ ಭಾರಿ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಿರಡಿಯಿಂದ ಮೈಸೂರಿಗೆ ವಾಪಸ್‌ ಆಗುತ್ತಿದ್ದ ರೈಲಿಗೆ ಮಂಗಳವಾರ ರಾತ್ರಿ ನುಗ್ಗಿದ 30ರಿಂದ 50ಕ್ಕೂ ಹೆಚ್ಚು ದರೋಡೆಕೋರರು ಮಾರಕಾಸ್ತ್ರಗಳಿಂದ ಪ್ರಯಾಣಿಕರನ್ನು ಬೆದರಿಸಿ, ಎಸ್‌1-ಎಸ್‌14 ಬೋಗಿಗಳ ನೂರಾರು ಪ್ರಯಾಣಿಕರಿಂದ ಲಕ್ಷಾಂತರ ರುಪಾಯಿ ಹಣ , ಚಿನ್ನಾಭರಣಗಳನ್ನು ದೋಚಿಸಿದ್ದಾರೆ. ಇನ್ನು ಈ ರೈಲಿನಲ್ಲಿದ್ದ ಹೆಚ್ಚಿನ ಪ್ರಯಾಣಿಕರ ಪೈಕಿ ಕರ್ನಾಟಕದ ಪ್ರಯಾಣಿಕರೇ ಹೆಚ್ಚಾಗಿದ್ದರು ಎಂದು ತಿಳಿದುಬಂದಿದೆ. ಎಲ್ಲರೂ ಶಿರಡಿ ಯಾತ್ರೆ ಮುಗಿಸಿ ಕರ್ನಾಟಕಕ್ಕೆ ವಾಪಸಾಗುತ್ತಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ಮಹಾರಾಷ್ಟ್ರದ ಬಾಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಿರಡಿಯಿಂದ ಮೈಸೂರಿಗೆ ವಾಪಸಾಗುತ್ತಿದ್ದ ರೈಲು ಮಹಾರಾಷ್ಟ್ರದ ಬಾಲಾಪುರ ಬಳಿ ವೇಗವನ್ನು ಕಡಿತಗೊಳಿಸಿಕೊಂಡಿದೆ. ಇದೇ ಸಮಯವನ್ನು ಕಾಯುತ್ತಿದ್ದ ದರೋಡೆಕೋರರ ಗುಂಪು ತಡರಾತ್ರಿ ರೈಲಿನ ಎಸ್1ನಿಂದ ಎಸ್14 ನಡುವಿನ ಬೋಗಿಗಳಿಗೆ ಪ್ರಯಾಣಿಕರನ್ನು ಬೆದರಿಸಿ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.

ರೈಲು ಬಾಲಾಪುರ ನಿಲ್ದಾಣಕ್ಕೆ ತಲುಪಿದ ನಂತರ ಪ್ರಯಾಣಿಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 5 ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಪೊಲೀಸರು ಪ್ರಯಾಣಿಕರಿಂದ ಮಾಹಿತಿ ಸಂಗ್ರಹ ಮಾಡಿ ದೂರು ಸ್ವೀಕರಿಸಿದ್ದಾರೆ. ಮಾರಕಾಸ್ತ್ರಗಳನ್ನು ತೋರಿಸಿ ಪ್ರಯಾಣಿಕರನ್ನು ದೋಚಿದ ಗುಂಪು ಬಾಲಾಪುರ ನಿಲ್ದಾಣದ ಸಮೀಪವೇ ಚೈನ್ ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video