ಲಖನೌ: ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ರಾಜ್ಯ ಸಚಿವ ರಾಮಮೂರ್ತಿ ಸಿಂಗ್ ವರ್ಮಾ ವಿರುದ್ಧ ಶುಕ್ರವಾರ ಅತ್ಯಾಚಾರ ಆರೋಪ ಕೇಳಿಬಂದಿದೆ.
ಸಚಿವ ರಾಮಮೂರ್ತಿ ಸೇರಿದಂತೆ ಐವರು ವ್ಯಕ್ತಿಗಳ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವುದಾಗಿ ತಿಳಿದಬಂದಿದೆ.
ಅಂಗನವಾಡಿ ಕಾರ್ಯಕರ್ತೆ ನೀಡಿರುವ ದೂರಿನಲ್ಲಿ ತಾನೊಬ್ಬ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಏಪ್ರಿಲ್ 15 ರಂದು ಶಾಲೆಯ ಬಾಗಿಲು ಮುಚ್ಚಿ ಮನೆಗೆ ಹಿಂತಿರುಗುವಾಗ ಇದ್ದಕ್ಕಿದ್ದಂತೆ ದ್ವಿಚಕ್ರ ವಾಹನದಲ್ಲಿ ಬಂದ ರಾಮಮೂರ್ತಿ ವರ್ಮಾ ಅವರ ಬೆಂಬಲಿಗರು ಏಪ್ರಿಲ್ 19 ರಂದು ರಾಮಮೂರ್ತಿ ಅವರು ಭೇಟಿಯಾಗುವಂತೆ ತಿಳಿಸಿದ್ದಾರೆ ಎಂದರು. ಯಾವ ಕಾರಣಕ್ಕೆ ಎಂದು ಕೇಳಿದಾಗ ಅಶ್ಲೀಲ ಪದಗಳಿಂದ ನಿಂದಿಸಿ ನಂತರ ಹೊರಟಿಹೋದರು.
ನಂತರ ಏಪ್ರಿಲ್ 30 ರಂದು ನನ್ನ ಮೊಬೈಲ್ ಗೆ ಕರೆಯೊಂದು ಬಂತು. ಕರೆ ಸ್ವೀಕರಿಸಿ ಮಾತನಾಡಿದಾಗ, ಕರೆ ಮಾಡಿದ ವ್ಯಕ್ತಿ ರಾಮಮೂರ್ತಿ ವರ್ಮಾ ಎಂದು ಹೇಳಿದ. ನಂತರ ನಿನ್ನನ್ನು ಕರೆದುಕೊಂಡು ಬರುವಂತೆ ಅಮಿತ್ ಎಂಬಾತನನ್ನು ಕಳುಹಿಸಿದ್ದೆ. ಆದರೆ ಏಕೆ ಬರಲಿಲ್ಲ. ಮುಂಬರುವ ದಿನಗಳಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಬೆದರಿಕಿ ಹಾಕಿದ. ಇಷ್ಟಾದರೂ ನಾನು ಈ ಬಗ್ಗೆ ತಲೆಕೆಡಿಕೊಂಡಿರಲಿಲ್ಲ.
ಇದಾದ ಕೆಲವು ದಿನಗಳ ನಂತರ ಮನೆಗೆ ಬಂದ ಇನ್ಸ್ ಪೆಕ್ಟರ್ ಒಬ್ಬರು ಬಲವಂತವಾಗಿ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹಕ್ಕೆ ಕರೆದೊಯ್ದರು. ಸ್ಥಳದಲ್ಲಿ ಸಚಿವ ರಾಮಮೂರ್ತಿ ವರ್ಮಾ ಹಾಗೂ ಇನ್ನಿತರೆ ನಾಲ್ವರು ಬೆಂಬಲಿಗರಿದ್ದರು. ನಂತರ ಅತಿಥಿ ಗೃಹದಲ್ಲಿ ರಾಮಮೂರ್ತಿ ನನ್ನ ಮೇಲೆ ಅತ್ಯಾಚಾರವೆಸಗಿದರು. ನಂತರ ಆತನ ಬೆಂಬಲಿಗರು ಅತ್ಯಾಚಾರ ಮಾಡಿದರು ಎಂದು ಅತ್ಯಾಚಾರ ಪೀಡಿತ ಮಹಿಳೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.