ಹೆಣ್ಣುಮಕ್ಕಳು ಜೀನ್ಸ್ ಹಾಕೋದ್ರಿಂದ್ಲೇ ಭೂಕಂಪ ಅಂತೆ..!
ಈ ಪ್ರಪಂಚದಲ್ಲಿ ಆಗಾಗ ಭೂಕಂಪನಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸೋದು ಏಕೆ ಗೊತ್ತಾ..? ಹೆಣ್ಣು ಮಕ್ಕಳು ಜೀನ್ಸ್ ಹಾಕೊದ್ರಿಂದ...
ಇಸ್ಲಾಮಾಬಾದ್: ಈ ಪ್ರಪಂಚದಲ್ಲಿ ಆಗಾಗ ಭೂಕಂಪನಗಳಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸೋದು ಏಕೆ ಗೊತ್ತಾ..? ಹೆಣ್ಣು ಮಕ್ಕಳು ಜೀನ್ಸ್ ಹಾಕೊದ್ರಿಂದ...
ಹೌದು.. ಭೂಕಂಪನಕ್ಕೆ ಹೆಣ್ಣುಮಕ್ಕಳು ಜೀನ್ಸ್ ಹಾಕೊದೇ ಕಾರಣವಂತೆ. ಹೀಗಂತ ನಾವು ಹೇಳ್ತಿರೋದು ಅಲ್ಲ. ಪಾಕಿಸ್ತಾನದ ಪ್ರಮುಖ ಧಾರ್ಮಿಕ ಮುಖಂಡ ಜಮಾತ್-ಉಲೇಮಾ-ಇ-ಇಸ್ಲಾಮಿ-ಫಜಿ (ಜೆಯುಐ-ಎಫ್) ಸಂಘಟನೆ ಮುಖ್ಯಸ್ಥ ಮೌಲಾನ ಫಜ್ಲುರ್ ರೆಹಮಾನ್ ಅವರ ಹೇಳಿಕೆ ಇದು. ಫಜ್ಲುರ್ ರೆಹಮಾನ್ ಅವರ ಪ್ರಕಾರ ಮಹಿಳೆಯರ ಇಂತಹ ದೇಹ ಪ್ರದರ್ಶನದ ಸ್ವಭಾವದಿಂದಾಗಿಯೇ ಭೂಕಂಪನಗಳಂತಹ ಪ್ರಾಕೃತಿಕ ವಿಕೋಪಗಳು ಮತ್ತು ಹಣದುಬ್ಬರದತಂಹ ಸಮಸ್ಯೆಗಳು ಸಂಭವಿಸುತ್ತಿವೆಯಂತೆ. ಹೀಗಾಗಿ ಸೈನಿಕರು ಜೀನ್ಸ್ ಧರಿಸುವ ಹೆಣ್ಣುಮಕ್ಕಳ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಬೇಕು ಎಂದು ಫಜ್ಲುರ್ ರೆಹಮಾನ್ ಆಗ್ರಹಿಸಿದ್ದಾರೆ.
ಇಸ್ಲಾಮಾಬಾದಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಯುಐ-ಎಫ್ ಮುಖ್ಯಸ್ಥ ಮೌಲಾನ ಫಜ್ಲುರ್ ರೆಹಮಾನ್, ಹೆಣ್ಣು ಮಕ್ಕಳ ಈ ಬದಲಾದ ಆಂಗಿಕ ಪ್ರದರ್ಶನದ ಹವ್ಯಾಸದಿಂದಾಗಿ ವಿಶ್ವಾದ್ಯಂತ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಬಲೂಚಿಸ್ತಾನದಲ್ಲಿನ ಬಿಕ್ಕಟ್ಟು, ಪಾಕಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯ ಹದಗೆಡುವಿಕೆಗೂ ಇದೇ ಕಾರಣ. ಹೀಗಾಗಿ ಇಂತಹ ಮಹಿಳೆಯರನ್ನು ಮನೆಯಲ್ಲಿ ಕೂಡಿಹಾಕಬೇಕು. ಇದನ್ನೇ ಶೆರಿಯಾ ಕಾನೂನು ಕೂಡ ಹೇಳತ್ತದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಶೆರಿಯಾ ಕಾನೂನನ್ನು ಜಾರಿಗೊಳಿಸಿದರೆ ಆಗ ತಾಲಿಬಾನ್ ಸಹೋದರರು ದಾಳಿ ನಡೆಸುವುದನ್ನು ಕೈ ಬಿಡುತ್ತಾರೆ ಎಂದು ಫಜ್ಲುರ್ ರೆಹಮಾನ್ ಹೇಳಿದ್ದಾರೆ.
ಇದೇ ವೇಳೆ ತಾಲಿಬಾನ್ ಹೋರಾಟದ ಕುರಿತು ಮಾತನಾಡಿದ ಫಜ್ಲುರ್ ರೆಹಮಾನ್, ತಾಲಿಬಾನಿಗಳೇನೂ ಪಾಕಿಸ್ತಾನದ ಶತ್ರುಗಳಲ್ಲ. ಹೀಗಾಗಿ ಪಾಕಿಸ್ತಾನಿ ಸೇನಾಪಡೆಗಳು ತಾಲಿಬಾನಿಗಳನ್ನು ಗುರಿಯಾಗಿಸಿಕೊಳ್ಳುವ ಬದಲು ನಮ್ಮ ನಿಜವಾದ ಶತ್ರುಗಳ ಮೇಲೆ ದಾಳಿ ಮಾಡಬೇಕು. ತಾಲಿಬಾನ್ ಮೂಲಕ ತನ್ನ ಕ್ರೋಧವನ್ನು ವ್ಯಕ್ತ ಪಡಿಸುತ್ತಿರುವ ದೇವರು ಅದನ್ನು ನಿಲ್ಲಿಸಿದರೆ
ಪಾಕಿಸ್ತಾನದಲ್ಲಿ ಶಾಂತಿ ನೆಲೆಸುತ್ತದೆ. ಆಗ ತಾನಾಗಿಯೇ ಪಾಕಿಸ್ತಾನದ ಅಭಿವೃದ್ದಿಯಾಗುತ್ತದೆ. ವಿದೇಶಿ ಬಂಡವಾಳಗಳು ಹರಿಯುತ್ತದೆ. ಹೀಗಾಗಿ ಫ್ಯಾಷನ್ ಹೆಸರಲ್ಲಿ ದೇಹ ಪ್ರದರ್ಶನ ಮಾಡುವ ಪಾಕಿಸ್ತಾನಿ ಮಹಿಳೆಯರ ವಿರುದ್ಧ ಯುದ್ಧ ಸಾರಿ ಎಂದು ನಾನು ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಮತ್ತು ಪಾಕಿಸ್ತಾನ ಅಧ್ಯಕ್ಷರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಫಜ್ಲುರ್ ರೆಹಮಾನ್ ಹೇಳಿದ್ದಾರೆ.