ಮೋದಿಗೆ ಐದು ವರ್ಷ ಪೂರ್ತಿ ಸಮಯ ಬೇಕು
ಕೇವಲ ಒಂದು ವರ್ಷದ ನರೇಂದ್ರ ಮೋದಿ ಸರ್ಕಾರದ ಸಾಧನೆಬಗ್ಗೆ ಏನೂ ಹೇಳಲಾಗದು. ಹೀಗೆಂದು ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ..
ಮುಂಬೈ: ಕೇವಲ ಒಂದು ವರ್ಷದ ನರೇಂದ್ರ ಮೋದಿ ಸರ್ಕಾರದ ಸಾಧನೆಬಗ್ಗೆ ಏನೂ ಹೇಳಲಾಗದು. ಹೀಗೆಂದು ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅಭಿಪ್ರಾಯಪಟ್ಟಿದ್ದಾರೆ. ಸಿಎನ್ ಎನ್-ಐಬಿಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ``5 ವರ್ಷಗಳ ಕಾಲ ಅವರ ನೇತೃತ್ವದ ಸರ್ಕಾರಕ್ಕೆ ಮತ ಹಾಕಿದ್ದಾರೆ. ಅವಧಿ ಪೂರ್ತಿಯಾಗುವವರೆಗೆ ಅವಕಾಶ ನೀಡಬೇಕು. ನಂತರ ಚುನಾವಣೆಯಲ್ಲಿ ಜನ ಮತದಾನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಲಿ. ಸರ್ಕಾರದ ಕೆಲಸ ಖುಷಿಯಾಗಿದ್ದರೆ ಮತ್ತೊಮ್ಮೆ ಆಯ್ಕೆ ಮಾಡಲಿ. ಇಲ್ಲದಿದ್ದರೆ ತಿರಸ್ಕರಿಸಲಿ'' ಎಂದಿದ್ದಾರೆ.
ಒಳ್ಳೆಯದಾಗಲಿ : ರಾಹುಲ್ ಗಾಂಧಿಯವರ 2 ತಿಂಗಳ ರಜೆ ಬಳಿಕದ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಚ್ಚನ್ ಒಬ್ಬೊಬ್ಬ ವ್ಯಕ್ತಿಯದು ಒಂದೊಂದು ಶೈಲಿ. ರಾಹುಲ್ ಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳಿದರು. ಗಾಂಧಿ ಕುಟುಂ ಬದ ಜತೆಗಿನ ತಮ್ಮ ಒಡನಾಟ ರಾಷ್ಟ್ರೀಯ ವಿಚಾರವಾಗಬೇಕಾಗಿಲ್ಲ. ತಮ್ಮ ತಂದೆಯವರ ಕಾಲದಿಂದಲೂ ನೆಹರೂ-ಗಾಂಧಿ
ಕುಟುಂಬದ ಜತೆಗೆ ಉತ್ತಮ ಸಂಬಂಧವಿತ್ತು. ಅದನ್ನು ಗೌರವಿಸುವುದಾಗಿ ಬಿಗ್
ಬಿ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.