ಸಾಂದರ್ಭಿಕ ಚಿತ್ರ 
ದೇಶ

ದೆಹಲಿಯಲ್ಲಿ ಮತ್ತೊಮ್ಮೆ ಉಬರ್ ಕ್ಯಾಬ್ ಡ್ರೈವರ್ ದೌರ್ಜನ್ಯ

25 ವರ್ಷದ ಮಹಿಳೆ ಮೇಲೆ ಉಬರ್ ಕ್ಯಾಬ್ ಡ್ರೈವರ್ ನಿಂದ ಅತ್ಯಾಚಾರ ನಡೆದ ಪ್ರಕರಣ ಜನ ಮಾನಸದಿಂದ ಮರೆಯುವ...

ನವದೆಹಲಿ: 25 ವರ್ಷದ ಮಹಿಳೆ ಮೇಲೆ ಉಬರ್ ಕ್ಯಾಬ್ ಡ್ರೈವರ್ ನಿಂದ ಅತ್ಯಾಚಾರ ನಡೆದ ಪ್ರಕರಣ ಜನ ಮಾನಸದಿಂದ ಮರೆಯುವ ಮುನ್ನವೇ ಮತ್ತೆ ಉಬರ್ ಕ್ಯಾಬ್ ಚಾಲಕನೊಬ್ಬ ಪ್ರಯಾಣಿಕ ಮಹಿಳೆಗೆ ಬಲವಂತವಾಗಿ ಮುತ್ತು ನೀಡಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕ್ಯಾಬ್ ಗಳು ಮಹಿಳೆಯರಿಗೆ ಎಷ್ಟು ಸೇಫ್ಟಿ ಎಂಬ ಬಗ್ಗೆ ಪ್ರಶ್ನಿಸುವಂತಾಗಿದೆ.

ಡಿಸೆಂಬರ್ 25 ರಂದು ದೆಹಲಿಯಲ್ಲಿ ಉಬರ್ ಕ್ಯಾಬ್ ಚಾಲಕನಿಂದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಸರ್ಕಾರ, ಇಂಟರ್ನೆಟ್ ಮೂಲಕ ಉಬರ್ ಕ್ಯಾಬ್ ಟ್ಯಾಕ್ಸಿ ಸೇವೆ ನೋಂದಣಿಯನ್ನು ನಿಷೇಧಿಸಿದೆ. ಈ ನಡುವೆಯೂ ಮತ್ತೆ ವೆಬ್ ನಲ್ಲಿ ಗುರಂಗಾವ್ ನಿಂದ ಮಹಿಳೆಯೊಬ್ಬರು ಟ್ಯಾಕ್ಸಿ ಬುಕ್ ಮಾಡಿದ್ದರು. ಆ ಟ್ಯಾಕ್ಸಿ ಚಾಲಕ ವಿನೋದ್ ಎಂಬಾತ ಆಕೆಗೆ ಬಲವಂತವಾಗಿ ಮುತ್ತು ನೀಡಲು ಯತ್ನಿಸಿದ ಎಂದು ಮಹಿಳೆಯ ಸಹೋದರ ಮೇ 30 ರಂದು ಫೇಸ್ ಬುಕ್ ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಈ ಸಂಬಂಧ ಉಬರ್ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಕಂಪನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದುವರೆಗೂ ಕಂಪನಿ ಸಂಬಂಧಪಟ್ಟ ಚಾಲಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಮಹಿಳೆಯ ಸಹೋದರ ಆರೋಪಿಸಿದ್ದಾರೆ,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!