(ಸಾಂದರ್ಭಿಕ ಚಿತ್ರ) 
ದೇಶ

ಅತ್ಯಾಚಾರ ಸಂತ್ರಸ್ತರಿಗೆ ಪಿಇಪಿ ಚಿಕಿತ್ಸೆಯಿಂದ ಏಡ್ಸ್ ಸೋಂಕು ದೂರ

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 8 ಗಂಟೆಯ ಒಳಗೆ `ಪಿಇಪಿ' ಚಿಕಿತ್ಸೆಗೆ ಒಳಗಾದರೆ ಆಕೆ ಎಚ್‍ಐವಿ ಸೋಂಕಿಗೊಳಗಾಗುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ತಜ್ಞರು ಹೇಳಿದ್ದಾರೆ...

ಮುಂಬೈ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 8 ಗಂಟೆಯ ಒಳಗೆ `ಪಿಇಪಿ' ಚಿಕಿತ್ಸೆಗೆ ಒಳಗಾದರೆ ಆಕೆ ಎಚ್‍ಐವಿ ಸೋಂಕಿಗೊಳಗಾಗುವ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ತಜ್ಞರು ಹೇಳಿದ್ದಾರೆ.

ಆದರೆ ಈ ಜೀವರಕ್ಷಕ ಪಿಇಪಿ (ಪೋಸ್ಟ್ ಎಕ್ಸ್‍ಪೋಷರ್ ಪ್ರಾಫಿಲಾಕ್ಷಿಸ್) ಚಿಕಿತ್ಸೆ ಭಾರತದಲ್ಲಿ ಲಭ್ಯವಿಲ್ಲ ಹಾಗೂ ಇದನ್ನು ಕಡ್ಡಾಯ ಮಾಡಲಾಗಿಲ್ಲ ಎಂದು ಏಡ್ಸ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಡಾ. ಈಶ್ವರ್ ಗಿಲಾಡ ಹೇಳಿದ್ದಾರೆ. ಇದಕ್ಕೆ ಅರಿವಿನ ಕೊರತೆ ಕಾರಣ. ಅತ್ಯಾಚಾರ ನಡೆದ ಸಂದರ್ಭದಲ್ಲಿ ಕಾನೂನು ನೆರವು, ಚಿಕಿತ್ಸೆಗಳ ಜತೆಗೆ ಪಿಇಪಿ ಚಿಕಿತ್ಸೆಯನ್ನು ಕೊಡಬೇಕು. ಇದು ಎಚ್‍ಐವಿ ಸೋಂಕಿನ ಸಾಧ್ಯತೆಯನ್ನು ನೂರು ಶೇಕಡಾ ಇಲ್ಲವಾಗಿಸುತ್ತದೆ ಎಂದು ಗಿಲಾಡ ಹೇಳಿದ್ದಾರೆ.

ಮುಂಬೈಯಲ್ಲಿ ನಡೆಯುತ್ತಿರುವ ಮೂರು ದಿವಸಗಳ ಪಿಇಪಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದಂಥ ದೇಶದಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಕೊನೆ ಹಾಡಲು ನಾವು ಯತ್ನಿಸಬೇಕು. ಈ ಚಿಕಿತ್ಸೆಯ ಬಗ್ಗೆ ಎಲ್ಲರಿಗೂ ಗೊತ್ತಿದ್ದರೆ ಸೋಂಕು ನಿವಾರಣೆ ಸುಲಭ. ಇದು ಅಲ್ಪಕಾಲಾವ„ಯ, ಕಡಿಮೆ ಖರ್ಚಿನ, ವೈರಸ್ ನಿರೋಧಕ ಚಿಕಿತ್ಸೆ. ಅತ್ಯಾಚಾರದ ಎಂಟು ಗಂಟೆಯ ಒಳಗೆ ನೀಡಿದರೆ ಫಲಪ್ರದ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT