ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆಯ ದೀರ್ಘಾವಧಿಯ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿಪಿಎಂನ ಹಿರಿಯ ನಾಯಕ ಹಶೀಮ್ ಅಬ್ದುಲ್ ಹಲೀಮ್ (80)
ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಲವು ಸಮಯಗಳಿಂದ ಅವರು ಹೃದಯ ಸಂಬಂಧಿ ತೊಂದರೆಗೆ ಈಡಾಗಿದ್ದರು. ಹೀಗಾಗಿ ಅವರನ್ನು ಕೋಲ್ಕತಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯು ಸಿರೆಳೆದರು.
ರಾಜ್ಯಪಾಲ ಕೆ.ಎನ್.ತ್ರಿಪಾಠಿ, ಸಿಎಂ ಮಮತಾ ಬ್ಯಾನರ್ಜಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ಪ್ರಮುಖರು ಹಲೀಮ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಹಲೀಮ್ ಅವರು 1982ರಿಂದ 2011ರ ವರೆಗೆ ಸ್ಪೀಕರ್ ಆಗಿದ್ದರು. 1977ರಲ್ಲಿ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1977ರಿಂದ 1982ರ ವರೆಗೆ ಅವರು ಸಚಿವರಾಗಿದ್ದರು.