ಲಖನೌ: ಅತ್ಯಾಚಾರದ ಫಲವಾಗಿ ಜನಿಸಿದ ಮಗು ಅತ್ಯಾಚಾರಿಯ ಆಸ್ತಿಯಲ್ಲಿ ಹಕ್ಕು ಹೊಂದಿರುತ್ತದೆ ಎಂಬ ಮಹತ್ವದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ನೀಡಿದೆ.
ಅತ್ಯಾಚಾರಿಯು ಆ ಮಗುವಿನ ಜೈವಿಕ ತಂದೆಯೆನಿಸುತ್ತಾನೆ. ಆ ಮಗುವನ್ನು ಆತನ ನ್ಯಾಯಬದಟಛಿ ಮಗುವೆಂದು ಪರಿಗಣಿಸಬೇಕಾಗುತ್ತದೆ. ಈ ಸಂಕೀರ್ಣ ಸಾಮಾಜಿಕ ವಿಚಾರದ ಈ ಕುರಿತು ಸೂಕ್ತ ಕಾನೂನು ರಚನೆಯಾಗಬೇಕು ಎಂದು ನ್ಯಾ.ಶಬಿಹುಲ್ ಹಸ್‍ನೈನ್, ನ್ಯಾ.ಡಿ.ಕೆ. ಉಪಾಧ್ಯಾಯರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.
ಈ ಮಗುವನ್ನು ದತ್ತು ನೀಡಿದಾಗಲಷ್ಟೇ ಈ ಹಕ್ಕು ಇಲ್ಲವಾಗುತ್ತದೆ. ನಾವಿಲ್ಲಿ ಆಸ್ತಿ ಹಕ್ಕನ್ನಷ್ಟೇ ಗಮನಿಸುತ್ತಿದ್ದೇವೆ. ಇಲ್ಲಿ ಜನನದ ಬಗೆ ಅಪ್ರಸ್ತುತ. ಆ ವ್ಯಕ್ತಿಗೆ ಅನ್ವಯಿಸುವ ವೈಯಕ್ತಿಕ ಹಕ್ಕಿನ ಪ್ರಕಾರ ಇದು ನಿರ್ಧರಿಸಲ್ಪಡುತ್ತದೆ.
ಆದರೆ ಈ ಕುರಿತು ಮಾನದಂಡಗಳನ್ನು ನಿರ್ಧರಿಸಿ ನೀಡಲು ನಾವು ಮುಮದಾಗುವುದಿಲ್ಲ. ಅದನ್ನು ಶಾಸಕಾಂಗ ಸೂಕ್ತ ಕಾನೂನಿನ ಮೂಲಕ ನಿರ್ಧರಿಸಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ಮಗುವೊಂದರ ಭವಿಷ್ಯದ ಕುರಿತು ನೀಡಲಾದ ತೀರ್ಪಿನಲ್ಲಿ ಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics