ನಿರ್ದೇಶಕ ಕುಂದನ್ ಶಾ ಮತ್ತು ಸಯ್ಯೀದ್ ಮಿರ್ಜಾ (ಸಂಗ್ರಹ ಚಿತ್ರ) 
ದೇಶ

ಪರ-ವಿರೋಧ ಚಳವಳಿಯ ಸದ್ದು

ಅಸಹಿಷ್ಣುತೆ ವಿರೋಧಿಸಿ ಆರಂಭವಾಗಿರುವ ಪ್ರಶಸ್ತಿ ವಾಪ್ಸಿ ಚಳವಳಿ ಈಗ ಹೊಸ ತಿರುವು ಪಡೆಯುತ್ತಿದೆ. ಒಂದು ಕಡೆ ಪ್ರಶಸ್ತಿ ಮರಳಿಸುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಈ ಚಳವಳಿಯ ವಿರುದ್ಧವೂ ಕೆಲವು ಲೇಖಕರು ಧ್ವನಿಯೆತ್ತಿದ್ದಾರೆ...

ಮುಂಬೈ: ಅಸಹಿಷ್ಣುತೆ ವಿರೋಧಿಸಿ ಆರಂಭವಾಗಿರುವ ಪ್ರಶಸ್ತಿ ವಾಪ್ಸಿ ಚಳವಳಿ ಈಗ ಹೊಸ ತಿರುವು ಪಡೆಯುತ್ತಿದೆ. ಒಂದು ಕಡೆ ಪ್ರಶಸ್ತಿ ಮರಳಿಸುತ್ತಿರುವವರ ಸಂಖ್ಯೆ ದಿನೇ ದಿನೆ  ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಈ ಚಳವಳಿಯ ವಿರುದ್ಧವೂ ಕೆಲವು ಲೇಖಕರು ಧ್ವನಿಯೆತ್ತಿದ್ದಾರೆ.

ಗುರುವಾರ ಪ್ರಶಸ್ತಿ ವಾಪ್ಸಿ ಚಳವಳಿಗೆ ಮತ್ತಷ್ಟು ಬಲ ನೀಡುವಂತೆ ಚಲನಚಿತ್ರ ನಿರ್ದೇಶಕ ಕುಂದನ್ ಶಾ, ಸಯೀದ್ ಮಿರ್ಜಾ ಸೇರಿದಂತೆ ಸಿನಿಮಾ ವಲಯದ ೨೩ ಮಂದಿ ತಮ್ಮ ಪ್ರಶಸ್ತಿಗಳನ್ನು  ಮರಳಿಸಿದ್ದಾರೆ. ಅಷ್ಟೇ ಅಲ್ಲದೆ, ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಅರುಂಧತಿ ರಾಯ್ ಅವರೂ ತಮ್ಮ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ನೀಡುವ ಮೂಲಕ ಅಸಹಿಷ್ಣುತೆಯನ್ನು  ಪ್ರತಿಭಟಿಸಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ, ಸುಮಾರು ೩೬ ಮಂದಿ ಲೇಖಕರು ಹಾಗೂ ವಿದ್ವಾಂಸರು ‘ಪ್ರಶಸ್ತಿ ವಾಪ್ಸಿ’ಯನ್ನು ಖಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.  ಕರ್ನಾಟಕದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಇಂಡಿಯನ್ ಕೌನ್ಸಿಲರ್ ಕಲ್ಚರಲ್ ರಿಲೇಷನ್ಸ್ ಅಧ್ಯಕ್ಷ ಲೋಕೇಶ್ ಚಂದ್ರ, ಜೆಎನ್‌ಯು ಮಾಜಿ ಸಹ ಕುಲಪತಿ ಕಪಿಲ್ ಕಪೂರ್,  ಐಸಿಎಚ್‌ಆರ್ ಸದಸ್ಯ ದಿಲೀಪ್ ಕೆ. ಚಕ್ರವರ್ತಿ, ಐಐಎಸ್‌ಸಿಯ ಕೆ. ಗೋಪಿನಾಥ್ ಸೇರಿದಂತೆ ೩೬ ಮಂದಿ ಪ್ರಶಸ್ತಿ ವಾಪ್ಸಿಗೆ ಪ್ರತಿ ಚಳವಳಿ ಆರಂಭಿಸಿದ್ದಾರೆ. ಮೋದಿ ಅವರ ಗೆಲವನ್ನು  ಅರಗಿಸಿಕೊಳ್ಳಲಾಗ ದವರು ಪ್ರಶಸ್ತಿ ವಾಪ್ಸಿಯಂತಹ ನಾಟಕ ಮಾಡುತ್ತಿದ್ದಾರೆ ಎಂದೂ ಇವರು ಆರೋಪಿಸಿದ್ದಾರೆ.

ಚುನಾವಣೆಯಲ್ಲಾದ ಸೋಲನ್ನು ಸಹಿಸದೇ ಕೆಲವರು ಈ ದಾರಿ ಹಿಡಿದಿದ್ದಾರೆ. ಕೆಲವು ಮಾಧ್ಯಮಗಳು ಚಿಯರ್‌ಲೀಡರ್ಸ್‌ನಂತೆ ವರ್ತಿಸುತ್ತಿವೆ ಎಂದೂ ಈ ಲೇಖಕರು ದೂರಿದ್ದಾರೆ. ಪ್ರಶಸ್ತಿ  ವಾಪ್ಸಿಯ ಸಾಲಿಗೆ ಹೊಸ ಸೇರ್ಪಡೆಯೆಂಬಂತೆ ಅರುಂಧತಿ ರಾಯ್ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.  ಗುರುವಾರ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಬರೆದ ಅಂಕಣದಲ್ಲಿ ರಾಯ್ ಪ್ರಶಸ್ತಿ  ವಾಪ್ಸಿ ನಿರ್ಧಾರ ಪ್ರಕಟಿಸಿದ್ದಾರೆ. ಜತೆಗೆ, ‘ಮಾನವರ ಹತ್ಯೆ, ಗುಂಡಿನ ದಾಳಿ, ಸಜೀವ ದಹನ, ಸಾಮೂಹಿಕ ನರಮೇಧಗಳಂತಹ ಘಟನೆಗಳಿಗೆ ‘ಅಸಹಿಷ್ಣು’ ಎಂಬ ಪದ ಬಳಕೆಯೇ ಸರಿಯಲ್ಲ.  ಬದುಕಿರುವವರಿಗೂ ಜೀವನ ನರಕವಾಗಿದೆ. ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಇಡೀ ಜನಸಮುದಾಯವೇ, ಯಾವಾಗ ಎಲ್ಲಿಂದ ದಾಳಿ ನಡೆಯುತ್ತದೆಯೋ ಎಂಬ ಭಯದಲ್ಲಿ ಬದುಕುವಂತಾಗಿದೆ’ ಎಂದಿದ್ದಾರೆ ರಾಯ್.

ಬಿಜೆಪಿಯಿಂದ ಕಿರುಪುಸ್ತಕ: ಪ್ರಶಸ್ತಿ ವಾಪಸ್ ನೀಡುತ್ತಿರುವವರಿಗೆ ತಿರುಗೇಟು ನೀಡುವ ಸಲುವಾಗಿ ಬಿಜೆಪಿ ಗುರುವಾರ ‘ನೋ ದಿ ಟ್ರಸ್ಟ್’ ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಿದೆ. ಬಿಜೆಪಿ  ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ಅಮಿತ್ ಶಾ ಅವರು ಇದನ್ನು ಬಿಡುಗಡೆ ಮಾಡಿದ್ದಾರೆ. ಮೋದಿ ಸರ್ಕಾರದ ಅಭಿವೃದ್ಧಿ ಅಜೆಂಡಾದ ಹಳಿ ತಪ್ಪಿಸಲು ಇದನ್ನೆಲ್ಲ ಮಾಡಲಾಗುತ್ತಿದೆ. ಪ್ರಶಸ್ತಿ ವಾಪ್ಸಿ ಹಿಂದಿನ ಸತ್ಯವೇನು ಎಂಬುದನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯನಾಯ್ಡು ತಿಳಿಸಿದ್ದಾರೆ.

ಶಾರುಖ್‌ಗೆ ಹೆಚ್ಚಿನ ಭದ್ರತೆ: ಅಸಹಿಷ್ಣುತೆ ಬಗ್ಗೆ ಮಾತನಾಡಿ ಬಿಜೆಪಿ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿರುವ ಬಾಲಿವುಡ್ ನಟ ಶಾರುಖ್ ಖಾನ್‌ರ ಮುಂಬೈ ನಿವಾಸಕ್ಕೆ ಹೆಚ್ಚಿನ ಭದ್ರತೆ  ಒದಗಿಸಲಾಗಿದೆ. ಇಲ್ಲಿ ಈಗಾಗಲೇ ರಾಜ್ಯ ಮೀಸಲು ಪೊಲೀಸ್ ಪಡೆಯ ೫೦ ಸಿಬ್ಬಂದಿಯಿದ್ದು, ಈಗ ಇನ್ನೂ ೨೫ ಮಂದಿಯನ್ನು ನಿಯೋಜಿಸಲಾಗಿದೆ.

ಭಾರತಕ್ಕೆ ಬರಲಿದ್ದಾರೆ ಅಲಿ: ಸದ್ಯಕ್ಕೆ ಭಾರತದಲ್ಲಿ ಕಾರ್ಯಕ್ರಮ ನೀಡುವುದಿಲ್ಲ ಎಂದು ಘೋಷಿಸಿದ್ದ ಪಾಕ್ ಗಜಲ್ ಗಾಯಕ ಗುಲಾಂ ಅಲಿ ಅವರು ಗುರುವಾರ ಮಾತು ಬದಲಿಸಿದ್ದಾರೆ. ಲಖನೌ ಮಹೋತ್ಸವ ಸಮಿತಿಯ ಒತ್ತಾಯದ ಮೇರೆಗೆ ಡಿ.೩ರಂದು ಲಖನೌನಲ್ಲಿ ಕಾರ್ಯಕ್ರಮ ನೀಡಲು ಒಪ್ಪಿದ್ದಾರೆ.

ಜನರು ರಾಷ್ಟ್ರೀಯ ಪ್ರಶಸ್ತಿಗಾಗಿ ಹರಸಾಹಸ ಮಾಡುತ್ತಾರೆ. ಅದೊಂದು ರಾಷ್ಟ್ರೀಯ ಘನತೆಯ ವಿಚಾರ. ಆದರೆ, ಇವರೆಲ್ಲ ಅಂಥಾ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಇದು ಸರಿಯಲ್ಲ. ನನ್ನ  ಪ್ರಕಾರ, ಇದೆಲ್ಲ ರಾಜಕೀಯ ಪ್ರೇರಿತ ವಿಚಾರ.
-ಹೇಮಮಾಲಿನಿ ನಟಿ ರಾಜಕಾರಣಿ

ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ದೇಶದ ಅಲ್ಪಸಂಖ್ಯಾತ ವರ್ಗ, ಯಾವಾಗ ಎಲ್ಲಿಂದ ದಾಳಿ ನಡೆಯುತ್ತದೋ ಎಂಬ ಭಯದಿಂದಲೇ ಬದುಕುವ ಸ್ಥಿತಿ  ನಿರ್ಮಾಣವಾಗಿದೆ.
-ಅರುಂಧತಿ ರಾಯ್ ಕಾದಂಬರಿಗಾರ್ತಿ

ಪ್ರಶಸ್ತಿ ವಾಪ್ಸಿ ಸರಿಯಾದ ಕ್ರಮವಲ್ಲ. ಅಸಹಿಷ್ಣುತೆ ಎಂಬುದು ಕೇವಲ ಈಗಿನ ಸರ್ಕಾರದಲ್ಲಿ ಅಥವಾ ಹಿಂದಿನ ಸರ್ಕಾರದಲ್ಲಿ ಆಗುತ್ತಿರುವುದಲ್ಲ. ದೇಶದಲ್ಲಿ ಇದು ಹಿಂದಿನಿಂದಲೂ ಇದೆ. ನನ್ನ  ಪ್ರಕಾರ, ಪಕ್ಷ ಕಾಂಗ್ರೆಸ್ ಆಗಿರಲೀ, ಬಿಜೆಪಿಯಾಗಿರಲೀ ಎಲ್ಲರೂ ಸಹಬಾಳ್ವೆಯಿಂದ ಜೀವಿಸುವುದು ಮುಖ್ಯ.
-ಅನಿಲ್ ಕಪೂರ್ ಬಾಲಿವುಡ್ ನಟ

ಮತಕ್ಕಾಗಿ ಸಹಿಷ್ಣುತೆ ಮೇಲೆ ದಾಳಿ ನಡೆಸಲಾಯಿತು. ಈಗ ಬಿಹಾರ ಚುನಾವಣೆ ಮುಗಿಯಿತು. ಇನ್ನಾದರೂ ದೇಶ ಶಾಂತಿಯಿಂದಿರಲಿ ಎಂದು ನಾನು ಸಹಿಷ್ಣುತೆಯ ಚಾಂಪಿಯನ್‌ಗಳಿಗೆ  ಹೇಳಬಯಸುತ್ತೇನೆ. ಭಾರತವು ಅಭಿವೃದ್ಧಿಯತ್ತ ಸಾಗುತ್ತಿದೆ. ಅಸಹಿಷ್ಣುತೆ ಎಂಬುದು ನಮ್ಮ ದೇಶದ ಡಿಎನ್‌ಎಯಲ್ಲೇ ಇಲ್ಲ.
-ಮುಖ್ತಾರ್ ಅಬ್ಬಾಸ್ ನಖ್ವಿ
ಕೇಂದ್ರ ಸಚಿವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್