ನವದೆಹಲಿ: ಹೈಕೋರ್ಟ್, ಸುಪ್ರೀಂಕೋರ್ಟ್ ಗಳಲ್ಲಿ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳ ಭರ್ತಿ ಮಾಡಲು ಕೊಲಿಜಿಯಂಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ.
ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಗಾಗಿ ಸಾರ್ವ ಜನಿಕಗೆ ಅಭಿಪ್ರಾಯ ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನು ನ.13ರವರೆಗೆ ವಿಸ್ತರಿಸಿದ ಬೆನ್ನಲ್ಲೇ ಸುಪ್ರೀಂ ಈ ಸ್ಪಷ್ಟನೆ ನೀಡಿದೆ.
ಕೊಲಿಜಿಯಂ ಸುಧಾರಣೆ ಆಗ್ರಹ ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಾರ್ವಜನಿಕರಿಂದ ಸಲಹೆ ಸ್ವೀಕರಿಸುವ ಅವಧಿಯನ್ನು 9 ದಿನಗಳಿಗೆ ವಿಸ್ತರಿಸಿತ್ತು.
ಆದರೆ, ಇದರಿಂದ ಖಾಲಿ ಬಿದ್ದಿರುವ ನ್ಯಾಯಾಧೀಶರ ನೇಮಕಕ್ಕೆ ತೊಂದರೆ ಆಗಬಾರದು ಎಂದು ಕೊಲಿಜಿಯಂ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂಬ ಸಂದೇಶವನ್ನೂ ರವಾನಿಸಿದೆ.