ಕೇರಳದ ಪ್ರೊಫೆಸರ್ ಟಿಜೆ ಜಾಸೆಫ್
ತಿರುವನಂತಪುರಂ: 2010 ಇಸ್ವಿಯಲ್ಲಿ ಕೇರಳದ ಪ್ರೊಫೆಸರ್ ಟಿಜೆ ಜಾಸೆಫ್ ಅವರ ಕೈ ಕತ್ತರಿಸಿದ ಪ್ರಕರಣದ ಪ್ರಮುಖ ಆರೋಪಿ ಎಂ.ಕೆ. ನಾಸರ್ ಎರ್ನಾಕುಳಂನಲ್ಲಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ನ್ಯಾಯಾಲಯದಲ್ಲಿ ಶುಕ್ರವಾರ ಶರಣಾಗಿದ್ದಾರೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ನ್ಯಾಯಾಲಯ ಮೇ 8, 2015ರಂದು 10 ಮಂದಿಗೆ 8 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು.
ಈ ಪ್ರಕರಣದಲ್ಲಿ 37 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.
2010 ಜುಲೈ 5 ರಂದು ನಾಸರ್ ಸೇರಿದಂತೆ ಇತರ ಆರೋಪಿಗಳು ಪ್ರೊಫೆಸರ್. ಟಿಜೆ ಜೋಸೆಫ್ ಮೇಲೆ ಹಲ್ಲೆ ನಡೆಸಿದ್ದರು. ವ್ಯಾನ್‌ನಲ್ಲಿ ಬಂದ ಈ ಗುಂಪು ಇಗರ್ಜಿಗೆ ಹೋಗಿ ಬರುತ್ತಿದ್ದ ಜೋಸೆಫ್ ಅವರ ಕಾರನ್ನು ಮನೆಯ ಪಕ್ಕದಲ್ಲಿ ಅಡ್ಡಗಟ್ಟಿ ಗ್ಲಾಸ್ ಒಡೆದು, ಹೊರಗೆಳೆದು ಹಲ್ಲೆ ನಡೆಸಿದ್ದರು. ಕಾರಿನಲ್ಲಿದ್ದ ಜೋಸೆಫ್ ಅವರ ಅಮ್ಮ ಏಲಿ ಕುಟ್ಟಿ, ಸಹೋದರಿ ಸಿಸ್ಟರ್ ಮೇರಿ ಸ್ಟೆಲ್ಲಾ ಅವರನ್ನು ತಡೆ ಹಿಡಿದು, ಜೋಸೆಫ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಆಮೇಲೆ ರೋಡಿನಲ್ಲಿ ಮಲಗಿಸಿ ಕೊಡಲಿಯಿಂದ ಅವರ ಕೈ ಕತ್ತರಿಸಲಾಗಿತ್ತು.
ಪ್ರಮುಖ ಆರೋಪಿಯಾಗಿರುವ ನಾಸರ್ ಈ ಘಟನೆ ನಡೆದ ವೇಳೆ ಪಾಪ್ಯುಲರ್ ಫ್ರಂಟ್‌ನ ಜಿಲ್ಲಾ ಪದಾಧಿಕಾರಿಯಾಗಿದ್ದರು.