ದೆಹಲಿ: ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮೂಲ ನೆಲೆಯಾಗಿರುವ ಆರ್‌ಎಸ್‌ಎಸ್ ಅನ್ನು ಧೂಳೀಪಟ ಮಾಡುತ್ತದೆ' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.
ಜಾತ್ಯತೀತತೆ ಕಾಂಗ್ರೆಸ್‌ನ ರಕ್ತದಲ್ಲೇ ಇದೆ. ಅದನ್ನು ಯಾರೂ ಸುಲಭದಲ್ಲಿ ತೆಗೆಯಲು ಸಾಧ್ಯವಿಲ್ಲ. ಜಾತ್ಯತೀತತೆಯೇ ಕಾಂಗ್ರೆಸ್ ಪಕ್ಷದ ಡಿಎನ್‌ಎ ಆಗಿದೆ. ನಮ್ಮನ್ನು ನಾವು ಪುನಃಶ್ಚೇತನಗೊಳಿಸಿಕೊಂಡಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ನಾವು ಪರಾಭವಗೊಳಿಸುವುದು ಮಾತ್ರವಲ್ಲ ಸಂಪೂರ್ಣ ಪುಡಿ ಮಾಡುವುದನ್ನು ನೀವು ಕಾಣಬಲ್ಲಿರಿ' ಎಂದು ಹೇಳಿದ ರಾಹುಲ್ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ನಾಮಾವಶೇಷ ಮಾಡುವ ಕಾಂಗ್ರೆಸ್ ಅಭಿಯಾನದ ಸೂಚನೆ ನೀಡಿದ್ದಾರೆ,
ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ನಮ್ಮ ಮುಂದಿರುವ ಸವಾಲುಗಳ ಪರ್ವತವನ್ನು ಏರುವುದು ನಮಗೆ ಕಷ್ಟಕರವೇನಲ್ಲ. ನವಶಕ್ತಿ ಪಡೆದಿರುವ ಕಾಂಗ್ರೆಸ್ ಏಕಾಂಗಿಯಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ನಾಮಾವಶೇಷ ಮಾಡಬಲ್ಲುದು ಮತ್ತು ಅವೆರಡರ ವಿರುದ್ಧ ಹೋರಾಡುತ್ತಿರುವ ಅತೀ ದೊಡ್ಡ ಶಕ್ತಿಯೇ ಕಾಂಗ್ರೆಸ್' ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.