ವಿದೇಶಿಗರಿಗೆ ಬಾಡಿಗೆ ತಾಯಿ ನಿರ್ಬಂಧಕ್ಕೆ ಹೈಕೋರ್ಟ್ ತಡೆ
ವಿದೇಶಿಗರಿಗೆ ಬಾಡಿಗೆ ತಾಯಿಯಾಗುವುದನ್ನು ನಿರ್ಬಂಧಿಸಿ ಸರಕಾರ ಹೊರಡಿಸಿದ ಸುತ್ತೋಲೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ...
ಮುಂಬಯಿ: ವಿದೇಶಿಗರಿಗೆ ಬಾಡಿಗೆ ತಾಯಿಯಾಗುವುದನ್ನು ನಿರ್ಬಂಧಿಸಿ ಸರಕಾರ ಹೊರಡಿಸಿದ ಸುತ್ತೋಲೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನ್ಯಾ.ರವಿ ದೇಶಪಾಂಡೆ ನೇತೃತ್ವದ ರಜಾ ಪೀಠ ಡಾ.ಕೌಶಲ್ ಕಡಮ್ ಮತ್ತು ಕೆಲವು ಫಲವತ್ತತಾ ಕೇಂದ್ರಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ. ಈಗಾಗಲೇ ಅಂತಿಮ ಪ್ರಕ್ರಿಯೆಯಲ್ಲಿರುವ ವಿದೇಶಿ ದಂಪತಿಗೆ ಮಗುವನ್ನು ಪಡೆಯಲು ಅನುಮತಿ ನೀಡಿದೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆದೇಶದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಅಕ್ಟೋಬರ್ 27ರಂದು ಫಲವತ್ತತಾ ಕೇಂದ್ರಗಳ ವೈದ್ಯರಿಗೆ, ಬಾಡಿಗೆ ತಾಯಿ ಸೇವೆಯನ್ನು ಭಾರತೀಯ ದಂಪತಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಸೂಚನೆ ನೀಡಿತ್ತು. ವಿದೇಶಿ ದಂಪತಿಗೆ ಈ ಅವಕಾಶ ಪಡೆಯಲು ಅನುವು ಮಾಡಿಕೊಡದಂತೆ ಸೂಚಿಸಿತ್ತು. ಈ ಸೂಚನೆಯನ್ನು ಪ್ರಶ್ನಿಸಿ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಈಗಾಗಲೇ ಬಾಡಿಗೆ ತಾಯಿಯಾಗುವ ಅಂತಿಮ ಪ್ರಕ್ರಿಯೆಯಲ್ಲಿದ್ದು, ಇನ್ನು ಕೇವಲ 15-20 ದಿನಗಳ ಚಿಕಿತ್ಸೆ ಅಗತ್ಯವಿರುವವರಿಗೆ ಈ ಸೂಚನೆ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.