ನವದೆಹಲಿ: ಸಾಕಷ್ಟು ಅಧಿಕಾರ ಹಾಗೂ ಸಂಪನ್ಮೂಲಗಳನ್ನು ಹೊಂದಿದ್ದರೂ ಸಹ ಸೋಲು ಅನುಭವಿಸುತ್ತಾರೆಂಬುದಕ್ಕೆ ಬಿಹಾರ ಚುನಾವಣೆಯೊಂದು ಉದಾಹರಣೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇದೊಂದು ಪಾಠವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಭಾನುವಾರ ಹೇಳಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶ ಕುರಿತಂತೆ ಖಾಸಗಿ ವಾಹಿನಿಯೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರ ಫಲಿತಾಂಶವೊಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೊಂದು ಪಾಠವಾಗಿದ್ದು, ಅವರ ವರ್ತನೆ ಹಾಗೂ ನಡವಳಿಕೆಯನ್ನು ಸರಿಪಡಿಸಿಕೊಳ್ಳಲು ಇದೊಂದು ಉತ್ತಮ ಸಮಯವಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ಟ್ವಿಟರ್ ನಲ್ಲೂ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರ ಚುನಾವಣಾ ಪ್ರಚಾರದ ವೇಳೆ ಮೋದಿಯವರು ಬಹಳ ತೀಕ್ಷ್ಣ ಹಾಗೂ ಆಕ್ರಮಣಕಾರಿಯಾಗಿ ಭಾಷಣ ಮಾಡಿದ್ದರು, ತಾನು ಪ್ರಚಾರಕ್ಕಿಳಿದರೆ ಬಿಹಾರ ಚುನಾವಣೆ ಗೆದ್ದೇ ಗೆಲ್ಲುತ್ತೇವೆಂದು ಮೋದಿಯವರು ತಿಳಿದಿದ್ದರು ಎಂದು ಹೇಳಿದ್ದಾರೆ.