ನವದೆಹಲಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವೊಂದು ಸಹಿಷ್ಣುತೆ ಹಾಗೂ ಅಸಹಿಷ್ಣುತೆಯ ನಡುವಿನ ಫಲಿತಾಂಶವಾಗಿದ್ದು, ಸಹಿಷ್ಣುತೆಗೆ ಗೆಲುವು ಹಾಗೂ ಅಸಹಿಷ್ಣುತೆಗೆ ಸೋಲುಂಟಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತಂತೆ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಿತೀಶ್ ಕುಮಾರ್ ಜೀ, ಲಾಲೂ ಜೀ ಮತ್ತು ನಿಮ್ಮ ಎಲ್ಲಾ ತಂಡ ಹಾಗೂ ಬಿಹಾರದ ಎಲ್ಲಾ ನನ್ನ ಸಹೋದರ-ಸಹೋದರಿಯರೇ ಎಲ್ಲರಿಗೂ ಶುಭಾಶಯಗಳು. ಬಿಹಾರ ಚುನಾವಣಾ ಫಲಿತಾಂಶವೊಂದು ಅಸಹಿಷ್ಣುತೆಯ ಫಲಿತಾಂಶವಾಗಿದೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಈ ಹಿಂದೆಯೂ ಬಿಹಾರ ಚುನಾವಣೆ ಕುರಿತಂತೆ ಜೆಡಿಯು ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದರು. ಅಲ್ಲದೆ, ಟ್ವಿಟರ್ ನಲ್ಲಿ ಬಿಹಾರ ಜನತೆ ಮಹಾಮೈತ್ರಿ ಕೂಟಕ್ಕೆ ಮತಹಾಕುವಂತೆ ಮನವಿ ಮಾಡಿದ್ದರು.