ರೈಲ್ವೆ ಇಲಾಖೆ ದೀಪಾವಳಿ ಗಿಫ್ಟ್: ಅರ್ಧ ಗಂಟೆಗೆ ಮುನ್ನ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು
ರೈಲು ಹೊರಡುವುದಕ್ಕೂ 30 ನಿಮಿಷ ಮೊದಲೂ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯನ್ನು ನವೆಂಬರ್ 12 ರಿಂದ ಜಾರಿಗೆ ತರಲಾಗುತ್ತಿದೆ ...
ನವದೆಹಲಿ: ರೈಲು ಹೊರಡುವುದಕ್ಕೂ 30 ನಿಮಿಷ ಮೊದಲೂ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯನ್ನು ನವೆಂಬರ್ 12 ರಿಂದ ಜಾರಿಗೆ ತರಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಈ ಮೊದಲು ರೈಲು ಹೊರಡುವುದಕ್ಕೂ ಮುನ್ನ ಒಂದು ಬಾರಿ ಮಾತ್ರ ಕಾಯ್ದಿರಿಸಿದ ಆಸನಗಳ ಮಾಹಿತಿ ಪಟ್ಟಿ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಎರಡು ಬಾರಿ ಸಿದ್ದಪಡಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹೇಳಿಕೊಂಡಿರುವ ರೈಲ್ವೆ ಇಲಾಖೆ, ಕಾಯ್ದಿರಿಸಿದ ಆಸನಗಳ ಮೊದಲ ಮಾಹಿತಿ ಪಟ್ಟಿಯನ್ನು ರೈಲು ಹೊರಡುವುದಕ್ಕಿಂತ ನಾಲ್ಕು ಗಂಟೆ ಮೊದಲು ಸಿದ್ದಪಡಿಸಲಾಗುವುದು ಎಂದು ಹೇಳಿದೆ.
ಆ ನಂತರ ಅಂತಿಮವಾಗಿ ಇನ್ನೊಂದು ಪಟ್ಟಿ ಸಿದ್ಧಪಡಿಸಲಾಗುತ್ತದೆ. ಕಾರಣ ಅಂತಿಮ 30 ನಿಮಿಷಗಳಿಗಿಂತ ಮೊದಲು ಆನ್ಲೈನ್ ಅಥವಾ ಕೌಂಟರ್ನಲ್ಲಿ ಕಾಯ್ದಿರಿಸಿಕೊಳ್ಳಬಹು ದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.