ದೇಶ

ಒಆರ್ ಒಪಿ ಪ್ರತಿಭಟನೆ: 2 ,000 ನಿವೃತ್ತ ಯೋಧರಿಂದ ಪದಕ ವಾಪಸ್

Srinivas Rao BV

ನವದೆಹಲಿ: ಒನ್ ರ್ಯಾಂಕ್ ಒನ್ ಪೆನ್ಷನ್(ಒಆರ್ ಒಪಿ) ಯೋಜನೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ 2 ,000 ನಿವೃತ್ತ ಯೋಧರು ತಮ್ಮ ಪದಕಗಳನ್ನು ವಾಪಸ್ ನೀಡಿದ್ದಾರೆ.
ದೆಹಲಿ, ಹರ್ಯಾಣ, ಪಂಜಾಬ್ ನಲ್ಲಿ ನಿವೃತ್ತ ಯೋಧರು ಪ್ರತಿಭಟನೆ ನಡೆಸಿದ್ದು ಮಾಜಿ ಸೇನಾಧಿಕಾರಿಗಳ ವರ್ತನೆ ಸೈನಿಕರಿಗಿಂತ ಭಿನ್ನವಾಗಿದೆ ಮತ್ತು ಅವರಿಗೆ ತಪ್ಪು ಮಾರ್ಗದರ್ಶನ ಮಾಡಲಾಗಿದೆ ಎಂದು ಹೆಳಿಕೆ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಿರುದ್ಧ ನಿವೃತ್ತ ಯೋಧರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನಿವೃತ್ತ ಯೋಧರ ವಕ್ತಾರ ಕರ್ನಲ್ ಅನಿಲ್ ಕೌಲ್, 2 ,000 ನಿವೃತ್ತ ಯೋಧರ ಪದಕಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಪದಕಗಳನ್ನು ಸ್ವೀಕರಿಸದೇ ಇದ್ದರೆ, ರಸ್ತೆಯಲ್ಲೇ ಪದಕಗಳನ್ನು ಬಿಟ್ಟು ಹೋಗುವುದಾಗಿ ತಿಳಿಸಿದ್ದರು. ಆದ್ದರಿಂದ ಪದಕಗಳನ್ನು ಸ್ವೀಕರಿಸಿದ್ದೇವೆ ಎಂದು ಜಿಲ್ಲಾಧಿಕಾರಿ  ಸಂಜಯ್ ಕುಮಾರ್ ಹೇಳಿದ್ದಾರೆ.
ಚಂಡೀಗಢದಲ್ಲಿಯೂ ಸುಮಾರು 150 ಕ್ಕೂ ಹೆಚ್ಚು ನಿವೃತ್ತ ಯೋಧರು ಪದಕಗಳನ್ನು ವಾಪಸ್ ನೀಡಿದ್ದಾರೆ. ಒಟ್ಟಾರೆ 2 ,000 ನಿವೃತ್ತ ಯೋಧರು ಪದಕಗಳನ್ನು ವಾಪಸ್ ನೀಡಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಲ್ಲ ಎಂದು ಆರೋಪಿಸಿ ನಿವೃತ್ತ ಯೋಧರು ಪ್ರತಿಭಟನೆ ನಡೆಸುತ್ತಿದ್ದಾರೆ. 

SCROLL FOR NEXT