ಸಾಂದರ್ಭಿಕ ಚಿತ್ರ 
ದೇಶ

ದೀಪಾವಳಿಗೆ ಮಾಲಿನ್ಯದಲ್ಲಿ ಮುಳುಗುವ ನಗರಗಳು

ದೀಪಾವಳಿ ಬಂತೆಂದರೆ ಸಾಕು, ಪಟಾಕಿ ಸದ್ದು ಜೋರಾಗಿ ಇರುತ್ತದೆ.ನಗರ ಪ್ರದೇಶಗಳಲ್ಲಿ ಇದು ಹೆಚ್ಚು. ದೀಪಾವಳಿ ಸಂದರ್ಭದಲ್ಲಿ ಉಳಿದ...

ನವದೆಹಲಿ: ದೀಪಾವಳಿ ಬಂತೆಂದರೆ ಸಾಕು, ಪಟಾಕಿ ಸದ್ದು ಜೋರಾಗಿ ಇರುತ್ತದೆ. ನಗರ ಪ್ರದೇಶಗಳಲ್ಲಿ ಇದು ಹೆಚ್ಚು. ದೀಪಾವಳಿ ಸಂದರ್ಭದಲ್ಲಿ ಉಳಿದ ಸಮಯಗಳಿಗಿಂತ ವಾಯು ಮಾಲಿನ್ಯ ಅಧಿಕ. ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ  
ಕೇಳುವುದೇ ಬೇಡ. ಬಹುತೇಕ ಮಂದಿ ಪಟಾಕಿ ಹಚ್ಚಿ ಉಳಿದ ಸಮಯಗಳಿಗಿಂತ 23 ಪಟ್ಟು ಹೆಚ್ಚು ವಾಯುಮಾಲಿನ್ಯವಾಗುತ್ತದಂತೆ.ಇದು ಇತರ ಮೆಟ್ರೊಪಾಲಿಟನ್ ನಗರಗಳಲ್ಲಿ ಸಹ ಅಧಿಕ ಎನ್ನುತ್ತಾರೆ ತಜ್ಞರು.
 
ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಅಂಕಿಅಂಶ ಪ್ರಕಾರ, ಪ್ರತಿವರ್ಷ ಈ ಸಂಖ್ಯೆ ಹೆಚ್ಚಾಗುತ್ತದೆ. ದೀಪಾವಳಿ ಸಮಯದಲ್ಲಿ ಸಂಜೆ 6 ಗಂಟೆಯ ನಂತರ ಪಟಾಕಿ ಹಚ್ಚಲು ಆರಂಭಿಸಿದರೆ ರಾತ್ರಿ 10 ಗಂಟೆಯವರೆಗೆ, ಮಧ್ಯರಾತ್ರಿ ಇನ್ನೂ ಜಾಸ್ತಿಯಾಗುತ್ತದೆ. ಈ ಸಮಯಗಳಲ್ಲಿ ವಾತಾವರಣ ಅತ್ಯಂತ ಕಲುಷಿತವಾಗಿದ್ದು, ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಇದೇ ರೀತಿ ಇರುತ್ತದೆ.

ನಿರ್ದಿಷ್ಟ ಮಟ್ಟಕ್ಕಿಂತ ಜಾಸ್ತಿ ವಾತಾವರಣ ಕಲುಷಿತಗೊಳ್ಳುವುದು ಆರೋಗ್ಯದ ದೃಷ್ಟಿಯಿಂದ ತೊಂದರೆ ಎಂದು ವೈದ್ಯರು ಹೇಳುತ್ತಾರೆ. ಅಸ್ತಮಾ ಹಾಗೂ ಇತಹ ಉಸಿರಾಟ ತೊಂದರೆ, ಹೃದ್ರೋಗ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!