ಭುವನೇಶ್ವರ್: ಒಡಿಶಾದಲ್ಲಿ ಇಬ್ಬರು ಮಾವೋವಾದಿಗಳನ್ನು ಭದ್ರತಾ ಪಡೆ ಸಿಬ್ಬಂದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
"ಇಬ್ಬರು ಮಾವೋವಾದಿಗಳನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸ್ ಇಲಾಖೆ ಡಿಜಿ ಕೆ.ಬಿ ಸಿಂಗ್ ಹೇಳಿದ್ದು ಮೃತ ಮಾವೋವಾದಿಗಳ ಪೈಕಿ ಓರ್ವನನ್ನು ಸಂಗ್ರಾಮ್ ಎಂದು ಗುರುತಿಸಲಾಗಿದ್ದು ಮಾವೋವಾದಿಗಳ ಕಮಾಂಡರ್ ಆಗಿದ್ದ ಎಂದು ತಿಳಿದುಬಂದಿದೆ. ಮೃತ ಪಟ್ಟ ಮತ್ತೋರ್ವ ಮಾವೊವಾದಿಯ ಗುರುತು ಇನ್ನಷ್ಟೇ ಸಿಗಬೇಕಿದೆ.
ಗುಪ್ತಚರ ಇಲಾಖೆ ಮಾಹಿತಿ ಆಧಾರದಲ್ಲಿ ಚಂಡಿಪೋಶ್ ಅರಣ್ಯದಲ್ಲಿ ಸಿಆರ್ ಪಿಎಫ್ ಯೋಧರು ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದರು. ಮೃತ ಮಾವೋವಾದಿಗಳ ಬಳಿ ಇದ್ದ ನಾಲ್ಕು ರೈಫಲ್ ಗಳು, ಗ್ರೆನೇಡ್ 284 ರೌಂಡ್ ಬುಲೆಟ್ ಗಳನ್ನು ಜೆಲಟಿನ್ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.