ದೇಶ

ಪೊಲೀಸ್ ಎನ್ ಕೌಂಟರ್ ಗೆ ನಾಲ್ಕು ನಕ್ಸಲೀಯರು ಬಲಿ

Shilpa D

ಛತ್ತೀಸ್ ಘಡ: ಪೊಲೀಸರ ಜೊತೆ ನಡೆದ ಭೀಕರ ಗುಂಡಿನ ಘರ್ಷಣೆಯಲ್ಲಿ  ಕಮಾಂಡರ್ ಶ್ರೇಣಿಯ ನಕ್ಸಲ್ ಸೇರಿದಂತೆ ನಾಲ್ವರು ಕೆಂಪು ಉಗ್ರರು ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡವೊಂದು ಇಂದು ಬೆಳಗ್ಗೆ  ಕಾರ್ಯಾಚರಣೆ ನಡೆಸಿತು. ಮಿರ್ತೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲೀಯರ ಚಲನವಲನದ ಸುಳಿವು ಆಧರಿಸಿ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿತು ಎಂದು ಬಸ್ತಾರ್ ವಲಯದ ಐಜಿಪಿ ಎಸ್​ಆರ್​ಪಿ ಕಲ್ಲೂರಿ ತಿಳಿಸಿದ್ದಾರೆ.

ಛತ್ತೀಸ್ ಗಡದಿಂದ 450 ಕಿಮೀ ದೂರದ ಮಿರ್ತೂರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಗೆ 55 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಲ್ಲೂರ್ ಮತ್ತು ಹಕ್ವಾ ಗ್ರಾಮಗಳ ನಡುವಣ ಅರಣ್ಯ ಪ್ರದೇಶವನ್ನು ಪೊಲೀಸರು ಸುತ್ತುವರಿದಾಗ ಶಸ್ತ್ರಸಜ್ಜಿತ ನಕ್ಸಲೀಯರು ಮನಬಂದಂತೆ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡು ಹಾರಿಸಿದ್ದಾರೆ. ಸುಮಾರು 1 ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ.  

SCROLL FOR NEXT