ಚಂಡೀಘಢ: ಹರ್ಯಾಣದ ಫರೀದಾಬಾದ್ ನಲ್ಲಿರುವ ಟೈರ್ ದುರಸ್ತಿ ಅಂಗಡಿ ಮಾಲಿಕನಿಗೆ ಕರೆಂಟ್ ಬಿಲ್ ಶಾಕ್ ನೀಡಿದೆ. 77 ಕೋಟಿ ಬಿಲ್ ಪಾವತಿಸುವಂತೆ ಟೈರ್ ದುರಸ್ತಿ ಅಂಗಡಿ ಮಾಲಿಕನಿಗೆ ಸೂಚಿಸಲಾಗಿದೆ.
ಸುರೀಂದರ್ ಆಟೋ ವರ್ಕ್ಸ್ ನ ಮಾಲೀಕ ತನಗೆ ಬಂದಿರುವ ಬಿಲ್ ನ್ನು ನೋಡಿ ಅಘಾತಕ್ಕೊಳಗಾಗಿದ್ದು, ಬಾಡಿಗೆಗೆ ಪಡೆದಿರುವ ಜಾಗದಲ್ಲಿ ಟೈರ್ ರಿಪೇರಿ ಅಂಗಡಿ ನಡೆಸುತ್ತಿರುವ ವ್ಯಕ್ತಿಗೆ ಪ್ರತಿ ತಿಂಗಳೂ 2 ,000 -2 ,500 ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಈ ಬಾರಿ ವಿದ್ಯುತ್ ನಿಗಮದಿಂದ 77 .89 ಬಿಲ್ ನೀಡಲಾಗಿದೆ.
ಇಷ್ಟು ದೊಡ್ಡ ಮೊತ್ತದ ಬಿಲ್ ನ್ನು ನೋಡಿ ಅಘಾತಕ್ಕೊಳಗಾದ ಅಂಗಡಿ ಮಾಲಿಕನ ತಾಯಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಹರ್ಯಾಣ ಬಿಜಲಿ ವಿತರಣ ನಿಮಗಮದಿಂದ(ಡಿಹೆಚ್ ಬಿವಿಎನ್) ಅಕ್ಟೊಬರ್ 31 ರಂದು ಬಿಲ್ ನೀಡಿದೆ.
ಬೃಹತ್ ಮೊತ್ತದ ಬಿಲ್ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಅನೇಕ ಘಟನೆಗಳು ನಡೆದಿದ್ದು ಪಾನ್ ಅಂಗಡಿಯ ಮಾಲಿಕನಿಗೆ ಕಳೆದ ವರ್ಷ 132 ಕೋಟಿ ಬಿಲ್ ಪಾವತಿಸುವಂತೆ ಸೂಚಿಸಲಾಗಿತ್ತು. ಅದಕ್ಕೂ ಮುನ್ನ 2007 ರಲ್ಲಿ ವ್ಯಕ್ತಿಯೊಬ್ಬರಿಗೆ 234 ಕೋಟಿ ರೂಪಾಯಿ ಬಿಲ್ ನಿಡಲಾಗಿತ್ತು. ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು ತಾಂತ್ರಿಕ ದೋಷದ ಕಾರಣದಿಂದ 77 ಕೋಟಿ ಬಿಲ್ ಬಂದಿದೆ ಎಂದು ಹೇಳಿದ್ದಾರೆ.