ನವದೆಹಲಿ: ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಟಾ ನೂಡಲ್ಸ್ ಬಿಡುಗಡೆಯಾಗಿದೆ.
ಪತಂಜಲಿ ಆಟಾ ನೂಡಲ್ಸ್ಬೆಲೆ 15 ರು. ಬೆಲೆಯಾಗಿದ್ದು, ಇದರಲ್ಲಿ ಯಾವುದೇ ಸೀಸ ಅಥವಾ ಮೋನೊಸೋಡಿಯಂ ಗ್ಲುಟೋಮೇಟ್ ಅಂಶವಿಲ್ಲ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಜಟ್ ಪಟ್ ಪಾಕೋ. ಔರ್ ಬೇಫಿಕರ್ ಕಾವೋ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ನೂಡಲ್ಸ್ ಭಾರತದಾದ್ಯಂತ ಸುಮಾರು 3 ಲಕ್ಷ ಮಳಿಗೆಗಳನ್ನು ಹೊಂದಿದೆ.
ಕಳೆದ ವರ್ಷ ಪತಂಜಲಿ ಗ್ರೂಪ್ ಸುಮಾರು 1200 ಕೋಟಿ ರು. ಲಾಭ ಗಳಿಸಿದೆ. ಇನ್ನು ಮಕ್ಕಳ ಹೆಲ್ತ್ ಡ್ರಿಂಕ್ಸ್ ಗಳಾದ ಹಾರ್ಲಿಕ್ಸ್ ಮತ್ತು ಬೋರ್ನ್ ವಿಟಾದಂತೆ ಆಯುರ್ವೇದ ಮೂಲಿಕೆಗಳ್ನು ಒಳಗೊಂಡ ಪವರ್ ವಿಟಾ ಎಂಬ ಪುಡಿ ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.