ಮುಂಬೈ: 26/11 ರ ಉಗ್ರ ದಾಳಿಯಲ್ಲಿ ಪಾಕಿಸ್ತಾನ-ಅಮೆರಿಕನ್ ಲಷ್ಕರ್ ತೊಯ್ಬಾ ಉಗ್ರ ಡೇವಿಡ್ ಕೊಲೆಮನ್ ಹೆಡ್ಲಿ ಅವರನ್ನು ಆರೋಪಿಯನ್ನಾಗಿಸಲು ಮುಂಬೈ ಪೊಲೀಸರಿಗೆ ಮುಂಬೈ ಕೋರ್ಟ್ ಅನುಮತಿ ನೀಡಿದೆ.
ಹೆಡ್ಲಿಗೆ ಸಮನ್ಸ್ ಜಾರಿ ಮಾಡಿದ ನ್ಯಾಯಾಲಯ ಹೆಡ್ಲಿಯನ್ನು ಡಿಸೆಂಬರ್ 10 ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಮಾಡಲು ಸೂಚಿಸಿದೆ.
ಹೆಡ್ಲಿಯನ್ನು 26/11 ರ ದಾಳಿಯ ಆರೋಪಿಯನ್ನಾಗಿ ಮಾಡಲು ಅನುಮತಿ ಕೋರಿ ಮುಂಬೈ ಪೊಲೀಸರು ಅಕ್ಟೋಬರ್ 8 ರಂದು ಸೆಷನ್ಸ್ ಜಡ್ಜ್ ಜಿಎ ಸನಾಪ್ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಈ ಹಿಂದೆ ಮುಂಬೈ ಉಗ್ರ ದಾಳಿಗೆ ಸಂಬಂಧಪಟ್ಟಂತೆ ದಾಳಿಯ ಪ್ರಮುಖ ಸೂತ್ರಧಾರಿ ಸಯ್ಯದ್ ಜಬಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ವಿರುದ್ಧ ನ್ಯಾಯಾಲಯ ದೋಷಾರೋಪಪಟ್ಟಿ ದಾಖಲಿಸಿತ್ತು.