ದೇಶ

ಐಎಸ್ ಸವಾಲು, ಗುಪ್ತಚರಕ್ಕೆ ಹೆಚ್ಚುವರಿ ಬಲ

Srinivasamurthy VN

ನವದೆಹಲಿ: ಇಸಿಸ್ ನಿಂದ ಭಾರತಕ್ಕೆ ಬೆದರಿಕೆ ಇದೆ ಎಂಬುದನ್ನು ಗೃಹ ಸಚಿವ ರಾಜನಾಥ್ ಸಿಂಗ್ ಒಪ್ಪಿಕೊಂಡಿದ್ದು, ಇದು ನಮಗೆ ದೊಡ್ಡ ಸವಾಲು ಹೌದು. ಉಗ್ರಗಾಮಿ ಸಂಘಟನೆ ಬೆದರಿಕೆ ಬರೀ ಭಾರತಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೇ ಬೆದರಿಕೆ ಇದೆ. ಈ ಸವಾಲನ್ನು ಸಂಘಟಿತವಾಗಿ ಎದುರಿಸಬೇಕಾಗುತ್ತದೆ ಮತ್ತು ಎದುರಿಸುತ್ತೇವೆ ಎಂದು ಮಂಗಳವಾರ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಐಎಸ್ ವಿರುದ್ಧ ಟೊಂಕಕಟ್ಟಿ ನಿಂತಿರುವ ಬ್ರಿಟನ್ ಈಗ ತನ್ನ ಗುಪ್ತಚರ ಸಂಸ್ಥೆಯ ಸಿಬ್ಬಂದಿ ಸಾಮರ್ಥ್ಯವನ್ನು ಶೇ.15ರಷ್ಟು ಹೆಚ್ಚಿಸಲು ಮುಂದಾಗಿದೆ. ಗುಪ್ತಚರ ಏಜೆನ್ಸಿಗಳಲ್ಲಿ ಹೆಚ್ಚುವರಿ 1,900  ಅಧಿಕಾರಿಗಳನ್ನು ನೇಮಕ ಮಾಡಲು ಹಾಗೂ ಬ್ರಿಟಿಷ್ ವಿಶೇಷ ಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲೆಂದು 2020ರ ವೇಳೆಗೆ 2 ಶತಕೋಟಿ ಪೌಂಡ್‍ಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಸ್ವತಃ ಬ್ರಿಟನ್ ಪ್ರಧಾನಿ ಕ್ಯಾಮರೂನ್ ತಿಳಿಸಿದ್ದಾರೆ.

SCROLL FOR NEXT