ಕೊಲ್ಕತ್ತಾ: ಏಡ್ಸ್ ರೋಗ ಬಾಧಿತನಾಗಿರುವ ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಶಾಲೆಯಿಂದ ಹೊರತಳ್ಳಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಇಲ್ಲಿನ ಚಕ್‌ಲೈ ಭಾಗ್ ಗ್ರಾಮದಲ್ಲಿರುವ ದೀಪ್‌ಶಿಕ್ಷಾ ಎಂಬ ಖಾಸಗಿ ನರ್ಸರಿ ಶಾಲೆಯೊಂದರಲ್ಲಿ ಒಂದನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ಶುಭಂ (ಹೆಸರು ಬದಲಿಸಲಾಗಿದೆ) ಎಂಬ ವಿದ್ಯಾರ್ಥಿಗೆ ಹೆಚ್‌ಐವಿ ಏಡ್ಸ್ ತಗಲಿತ್ತು. ವಿದ್ಯಾರ್ಥಿಗೆ ಏಡ್ಸ್ ಇದೆ ಎಂದು ಗೊತ್ತಾಗುತ್ತಿದ್ದಂತೆ ಶಾಲೆಯಲ್ಲಿ ಹೆತ್ತವರ ಸಂಘ ಪ್ರತಿಭಟನೆ ನಡೆಸಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರದಬ್ಬಲಾಗಿತ್ತು.ಯ
ಶುಭಂ ಏಡ್ಸ್ ಬಾಧಿತನೆಂದು ತಿಳಿದಾಗ, ಇತರ ಮಕ್ಕಳನ್ನು ಶಾಲೆಗೆ ಕಳುಹಿಸಲು ಅವರ ಹೆತ್ತವರು ನಿರಾಕರಿಸಿದ್ದಾರೆ. ಶುಭಂನ್ನು ಶಾಲೆಗೆ ಬರಲು ಅನುಮತಿ ನೀಡುವುದಾದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ಬೆದರಿಕೆಯನ್ನೊಡ್ಡಲಾಗಿತ್ತು. ಬೆದರಿಕೆಗೆ ಮಣಿದ ಶಾಲೆಯ ಅಧಿಕಾರಿಗಳು ಶುಭಂ ಶಾಲೆಗೆ ಬರಬಾರದೆಂದು ನಿರ್ಬಂಧ ಹೇರಲಾಗಿತ್ತು.
ಅದೊಂದು ದಿನ ನನ್ನ ಮಗನಲ್ಲಿ ಶಾಲೆಗೆ ಬರಬೇಡ ಎಂದು ಅವನ ಅಧ್ಯಾಪಕರು ಹೇಳಿದ್ದರು. ಈ ಬಗ್ಗೆ ವಿಚಾರಿಸಲು ನಾನು ಶಾಲೆಗೆ ಹೋಗಿದ್ದೆ. ನನ್ನ ಮಗ ಹೆಚ್‌ಐವಿ ಪಾಸಿಟಿವ್ ಹೌದು ಅಂತಾರೆ ಶುಭಂನ ಅಮ್ಮ ಅಲ್ಪನಾ ಸಮಾಂತಾ (ಹೆಸರು ಬದಲಿಸಲಾಗಿದೆ). ಅವನಿಗೆ ಏಡ್ಸ್ ಇದೆ ಎಂಬುದು ಶಾಲೆಯ ಪ್ರಾಂಶುಪಾಲ ಸಂಜೀತ್ ಅವರಿಗೆ ಮೊದಲೇ ತಿಳಿದಿತ್ತು. ನನ್ನ ಮಗ ಆರೋಗ್ಯವಂತನಾಗಿದ್ದಾನೆ ಎಂದು ನಾನು ಮೆಡಿಕಲ್ ಸರ್ಟಿಫಿಕೇಟ್ ತೋರಿಸಿದ್ದೇನೆ. ಹೆಚ್‌ಐವಿ ಏಡ್ಸ್ ಜತೆಗೆ ಕುಳಿತುಕೊಳ್ಳುವುದರಿಂದಲೋ ಉಣ್ಣುವುದರಿಂದಲೋ ಹರಡುವುದಿಲ್ಲ ಎಂದು ನಾನು ಶಾಲೆಯವರಿಗೆ ಮನವರಿಕೆ ಮಾಡಿದರೂ ಅವರು ಕೇಳಲಿಲ್ಲ. ಏತನ್ಮಧ್ಯೆ, ಶುಭಂನ ಅಪ್ಪನಿಗೂ ಬೆದರಿಕೆ ಒಡ್ಡಲಾಗಿದೆ ಎಂದು ಅಲ್ಪನಾ ಹೇಳಿದ್ದಾರೆ.
ಆದರೆ ಶುಭಂ, ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಅದಕ್ಕೆ ಇದ್ಯಾವುದೂ ಕಾರಣವಲ್ಲ ಅಂತಿದ್ದಾರೆ ಪ್ರಾಂಶುಪಾಲ ಸಂಜಿತ್. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಐದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಮಂಗಳವಾರ (17 ನವೆಂಬರ್ ) ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics