ದೇಶ

ಧಾರ್ಮಿಕ ಸ್ವಾತಂತ್ರ್ಯಕ್ಕೆ ಭಾರತದಲ್ಲೇ ಬೆಂಬಲ ಹೆಚ್ಚು

Rashmi Kasaragodu
ವಾಷಿಂಗ್ಟನ್: ಧಾರ್ಮಿಕ ಸ್ವಾತಂತ್ಯಕ್ಕೆ ಬೆಂಬಲ ಸೂಚಿಸುವವರು ಭಾರತದಲ್ಲೇ ಹೆಚ್ಚು ಎಂದು ಸಮೀಕ್ಷೆಯೊಂದು ಹೇಳಿದೆ. ಅಮೆರಿಕ ಮೂಲದ ಫ್ಯೂ ರಿಸರ್ಚ್ (Pew Research) ಈ ಸಮೀಕ್ಷೆ ನಡೆಸಿದ್ದು, 38 ದೇಶಗಳಲ್ಲಿರುವ 40,786 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಇದರಲ್ಲಿ  ಶೇ. 84 ರಷ್ಟು ಅಮೆರಿಕನ್ನರು ಧಾರ್ಮಿಕ ಸ್ವಾತಂತ್ರ್ಯ ಬಹುಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿನವರು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಬೆಂಬಲ ಸೂಚಿಸಿದ್ದಾರೆ.
ಪಾಕಿಸ್ತಾನ, ಭಾರತ ಮತ್ತು ಇಂಡೋನೇಷ್ಯಾದಲ್ಲಿನ ಸಮೀಕ್ಷೆಯನ್ನು ನೋಡಿದರೆ 10 ರಲ್ಲಿ 8 ಮಂದಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಬೆಂಬಲ ಸೂಚಿಸಿದವರಾಗಿದ್ದಾರೆ. ಜಪಾನ್‌ನಲ್ಲಿ ಮಾತ್ರ ಶೇ. 24 ರಷ್ಟು ಮಂದಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಬೆಂಬಲ ಸೂಚಿಸಿದ್ದು, ಇನ್ನಿತರ ದೇಶಗಳಿಗೆ ಹೋಲಿಸಿದರೆ ಜಪಾನ್‌ನಲ್ಲಿ ಮಾತ್ರ ಇಷ್ಟೊಂದು ಕಡಿಮೆ ಬೆಂಬಲ ವ್ಯಕ್ತವಾಗಿದೆ.
SCROLL FOR NEXT