ಕೊಯಮತ್ತೂರು: ಗಗನ ಸಖಿಯೊಬ್ಬಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಹಿಂದೂ ಮಹಾಸಭಾ ಮುಖಂಡ ಹಾಗೂ ಇಬ್ಬರು ವಕೀಲರನ್ನು ಬಂಧಿಸಲಾಗಿದೆ.
ಚೆನ್ನೈಯಿಂದ ಹೊರಡುವ ವಿಮಾನದಲ್ಲಿದ್ದ ಈ ಮೂವರು ವಿಮಾನ ಟೇಕ್‌ಆಫ್ ಆಗುವ ಕೆಲಕ್ಷಣಗಳ ಮುನ್ನ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸಿದರೆಂದೂ ಆರೋಪಿಸಲಾಗಿದೆ.
ತಮಿಳುನಾಡು ಹಿಂದೂ ಮಹಾಸಭಾದ ಉಪಾಧ್ಯಕ್ಷ ಸುಭಾಷ್ ಸ್ವಾಮಿನಾಥನ್ ಹಾಗೂ ಸೆಂಥಿಲ್ ಕುಮಾರ್, ರಾಜಾ ಎಂಬುವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪಾನಮತ್ತರಾಗಿದ್ದ ಮೂವರು ರಾತ್ರಿ ೧೦ಕ್ಕೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ಮೊಬೈಲ್ ಮೂಲಕ ಗಗನಸಖಿಯ ಫೊಟೋ ತೆಗೆಯಲು ಹೋದಾಗ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಗಗನ ಸಖಿಯ ಜೊತೆ ಅನುಚಿತವಾಗಿ ವರ್ತಿಸಿ, ಸಹಪ್ರಯಾಣಿಕರು ಮತ್ತು ಪೈಲಟ್‌ನೊಂದಿಗೂ ಕೈಮಿಲಾಯಿಸಿದ್ದಾರೆ.
ಏರ್‌ಫೋರ್ಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಸಿಐಎಸ್‌ಎಫ್‌ನವರ ಮೂಲಕ ಬಂಧಿಸಿ ಕರೆದೊಯ್ಯಲಾಯಿತು. ಈ ಘಟನೆಯಿಂದ ವಿಮಾನ ಒಂದು ಗಂಟೆ ತಡವಾಗಿ ಹೊರಟಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos