ದೇಶ

ಸೇಫ್ ಸೆಕ್ಸ್ ಬಗ್ಗೆ ಹೇಳಲು ಕಾಂಡೋಮ್ ಇಮೋಜಿ!

Rashmi Kasaragodu
ಮೊಬೈಲ್ ಅಥವಾ ಕಂಪ್ಯೂಟರನಲ್ಲಿ ಸೆಕ್ಸ್ ಬಗ್ಗೆ ಚಾಟ್ ಮಾಡುವಾಗ ಜನರು ಹಲವಾರು ಇಮೋಜಿಗಳನ್ನು ಬಳಸುತ್ತಿರುತ್ತಾರೆ. ಇದೀಗ ಸುರಕ್ಷಿತ ಸೆಕ್ಸ್ ಬಗ್ಗೆ ಚಾಟಿಂಗ್ ಮಾಡಲು ಕಾಂಡೋಮ್ ಇಮೋಜಿ ಕೂಡ ಸೇರ್ಪಡೆ ಮಾಡಲು ಕಾಂಡೋಮ್ ಕಂಪನಿ ಡ್ಯುರೆಕ್ಸ್ ಮುಂದೆ ಬಂದಿದೆ.
ಸೇಫ್ ಸೆಕ್ಸ್ ಬಗ್ಗೆ ಅರಿವು ಮೂಡಿಸಲೋಸುಗ ಈ ಇಮೋಜಿಯನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಮಾತ್ರವಲ್ಲದೆ  ಲೈಂಗಿಕ ರೋಗಗಳ ಬಗ್ಗೆ ಅರಿವು ಮೂಡಿಸಿ, ಲೈಂಗಿಕತೆಯ ಬಗ್ಗೆ ಪರಸ್ಪರ ಮಾತನಾಡುವಾಗ ಈ ಇಮೋಜಿ ಬಳಕೆಗೆ ಬರುತ್ತದೆ ಎಂದು ಡ್ಯುರೆಕ್ಸ್ ಕಂಪನಿ ಹೇಳಿದೆ.
ಯುವ ಜನಾಂಗ ಸಾಮಾಜಿಕ ತಾಣಗಳನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಡ್ಯುರೆಕ್ಸ್ ಈ ಇಮೋಜಿ ತಯಾರಿಸಲು ಮುಂದಾಗಿದೆ. ಈ ಸಮೀಕ್ಷೆಯ ಪ್ರಕಾರ 18 ಮತ್ತು 25 ವರುಷದ ನಡುವೆ ಇರುವ ಜನರು ಚಾಟ್ ಮಾಡುವಾಗ ಹೆಚ್ಚಾಗಿ ಇಮೋಜಿಗಳನ್ನೇ ಬಳಸುತ್ತಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಸೆಕ್ಸ್  ಬಗ್ಗೆ ಚಾಟ್ ಮಾಡುವಾಗ ಇಮೋಜಿಗಳನ್ನು ಬಳಸುತ್ತಾರೆ. ಸೆಕ್ಸ್  ಬಗ್ಗೆ ಮಾತನಾಡುವಾಗ ಇಮೋಜಿಗಳನ್ನು ಬಳಸುವುದು ಉತ್ತಮ ಎಂದು ಶೇ. 84 ರಷ್ಟು ಜನ ಅಭಿಪ್ರಾಯ ಪಡುತ್ತಾರೆ.
ಸುರಕ್ಷಿತ ಲೈಂಗಿಕ ಸಂಬಂಧದ ಬಗ್ಗೆ ಪರಸ್ಪರ ಮಾತುಕತೆ ನಡೆಸಲು ಈ ಇಮೋಜಿಗಳು ಸಹಾಯವಾಗುತ್ತದೆ ಎಂದು ಡ್ಯುರೆಕ್ಸ್ ಹೇಳಿದೆ. ಡಿಸೆಂಬರ್ 1,  ವಿಶ್ವ ಏಡ್ಸ್ ದಿನದಂದು ಕಾಂಡೋಮ್ ಇಮೋಜಿಯನ್ನು ಯುನಿಕೋಡ್ ಇಮೋಜಿ ಸಬ್‌ಕಮಿಟಿಗೆ ಸಲ್ಲಿಸಲಾಗುವುದು.
SCROLL FOR NEXT