ಮಗಳು ವಿಧೀ ಖನ್ನಾ ಜೊತೆ ಇಂದ್ರಾಣಿ ಮುಖರ್ಜಿ (ಸಂಗ್ರಹ ಚಿತ್ರ) 
ದೇಶ

ಸಾವಿಗೂ ಮುನ್ನ ಶೀನಾಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದ ಇಂದ್ರಾಣಿ ಮಗಳು

ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಾವಿಗೂ ಮುನ್ನ ಇಂದ್ರಾಣಿ ಮುಖರ್ಜಿ ಮಗಳು...

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಾವಿಗೂ ಮುನ್ನ ಇಂದ್ರಾಣಿ ಮುಖರ್ಜಿ ಮಗಳು ಶೀನಾಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಳು ಎಂದು ಶನಿವಾರ ತಿಳಿದುಬಂದಿದೆ.

ಈ ಕುರಿತ ಮಾಹಿತಿಯು ಚಾರ್ಜ್ ಶೀಟ್ ನಲ್ಲಿ ದಾಖಲಾಗಿದ್ದು, ಚಾರ್ಜ್ ಶೀಟ್ ನಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ ಶೀನಾ ಬೋರಾ ಸಾಯುವುದಕ್ಕೂ ಮುನ್ನ ಇಂದ್ರಾಣಿ ಮುಖರ್ಜಿ ಮಾಜಿ ಪತಿ ಸಂಜೀವ್ ಖನ್ನಾ ಅವರ ಮಗಳಾದ ವಿಧೀ ಖನ್ನಾ ಶೀನಾ ಮೊಬೈಲ್ ಗೆ ಸಂದೇಶವೊಂದನ್ನು ಕಳುಹಿಸಿದ್ದಳು ಎಂದು ತಿಳಿದುಬಂದಿದೆ. ಸಂದೇಶದಲ್ಲಿ ಶೀನಾ ಈ ವಿಚಾರ ನಮ್ಮಿಬ್ಬರ ನಡುವೆಯೇ ಇರಲಿ. ನೀನು ಮತ್ತು ರಾಹುಲ್ ಇಬ್ಬರು ಹುಷಾರಾಗಿ ಇರಿ. ನಿಮ್ಮಿಬ್ಬರಿಂದ ಅಮ್ಮ (ಇಂದ್ರಾಣಿ) ತುಂಬಾ ತಲೆಕೆಡಿಸಿಕೊಂಡಿದ್ದಾರೆ. ನಿಮ್ಮಿಬ್ಬರ ನಡುವೆ ಅಡ್ಡವಾಗುವ ತೊಂದರೆಗಳು ಬರಬಹುದು. ಹೀಗಾಗಿ ನಿಮಗೆ ಎಚ್ಚರಿಕೆಯಿಂದಿರುವಂತೆ ಎಚ್ಚರಿಕೆ ನೀಡುತ್ತಿದ್ದೇನೆ.

ಈ ಬಗ್ಗೆ ನನಗೆ ಏನನ್ನು ಹೇಳಬೇಡ...ವಾಸ್ತವದಲ್ಲಿ ನಾನು ಈಗಾಗಲೇ ಸತ್ತುಹೋಗಿದ್ದೇನೆ. ಒಂದು ವೇಳೆ ನಾನು ಸತ್ತಿಲ್ಲ ಎಂದರೂ ಅಮ್ಮ (ಇಂದ್ರಾಣಿ) ನೋವಾಗುವ ಕೆಟ್ಟ ಕೆಲಸವನ್ನು ಮಾಡುತ್ತಾರೆ. ನನ್ನನ್ನು ನಂಬು ನನಗೆ ನಿನ್ನ ಒಪ್ಪಿಗೆ ಬೇಕಿದೆ...ಅಮ್ಮ (ಇಂದ್ರಾಣಿ)ಳಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಇಷ್ಟವಿಲ್ಲ. ಹೀಗಾಗಿ ಅವರ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಪ್ರಯತ್ನದಲ್ಲಿ ಯಾರೇ ಅಡ್ಡ ಬಂದರೂ ಅವರನ್ನು ದಾರಿಯಿಂದ ಕಿತ್ತುಹಾಕಲು ತಯಾರಿದ್ದಾರೆ ಎಂದು ವಿಧೀ ಸಂದೇಶದಲ್ಲಿ ಶೀನಾಗೆ ಹೇಳಿದ್ದಾಳೆಂದು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ.

ಇದಲ್ಲದೇ, ಹತ್ಯೆಗೆ ಪ್ರಮುಖ ಕಾರಣ ಪೀಟರ್ ಮುಖರ್ಜಿಯವರೇ ಎಂದು ಹೇಳಲಾಗುತ್ತಿದ್ದು,  ಶೀನಾ ಮತ್ತು ರಾಹುಲ್ ಇಬ್ಬರು ವಿವಾಹವಾದರೆ ಎಲ್ಲಿ ಆಸ್ತಿ ಶೀನಾ ಪಾಲಾಗುತ್ತದೋ ಎಂಬ ಭಯದಲ್ಲಿ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಶೀನಾ ಬೊರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಇಂದ್ರಾಣಿಯವರ ಪತಿ ಪೀಟರ್ ಮುಖರ್ಜಿಯವರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಲಾಗಿತ್ತು. ಅಲ್ಲದೇ, ಹತ್ಯೆಗೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಮಾಜಿ ಕಾರು ಚಾಲಕ ಶ್ಯಾಮ್ವಾರ್ ರೈ, ಸಂಜೀವ್ ಖನ್ನಾ ವಿರುದ್ಧ ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ದಾಖಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ